ಶೀಘ್ರ ಮುಂಡರಗಿ ತಾಲೂಕು ಕಸಾಪ ಅಧ್ಯಕ್ಷರ ಬದಲಾವಣೆ

22MDG4 PRESS MEET PALAKSHI GANADINNI
Published on

ಮುಂಡರಗಿ: ಕಳೆದ ನಾಲ್ಕೈದು ತಿಂಗಳಿಂದ ಕಸಾಪ ತಾಲೂಕು ಘಟಕದ ಚಟುವಟಿಕೆ ಕುಂಠಿತಗೊಂಡಿವೆ. ಕಸಾಪ ತಾಲೂಕು ಅಧ್ಯಕ್ಷರಿಂದ ಯಾವುದೇ ಸಾಹಿತ್ಯ ಕೆಲಸಗಳು ನಡೆಯುತ್ತಿಲ್ಲ. ಆದ್ದರಿಂದ ಆದಷ್ಟು ಬೇಗ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುವುದು ಎಂದು ಕಸಾಪ ತಾಲೂಕು ಸಲಹಾ ಮಂಡಳಿ ಸದಸ್ಯ ಪಾಲಾಕ್ಷಿ ಗಣದಿನ್ನಿ ಹೇಳಿದರು.


ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ತಾಲೂಕು ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ರಾಜೀನಾಮೆ ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ. ರಾಜೀನಾಮೆ ನೀಡಿದ್ದು ಅಧಿಕೃತ ಇದ್ದು, ವಾಪಸ್ ಪಡೆದಿದ್ದರ ಬಗ್ಗೆ ಅಧಿಕೃತವಿಲ್ಲ ಎಂದರು.


ತಾಲೂಕು ಕಸಾಪ ಸದಸ್ಯರ ಅಭಿಪ್ರಾಯ ಪಡೆದು ಒಮ್ಮತದಿಂದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿ. ಬಾಬು, ಎಸ್.ಎಸ್. ಗಡ್ಡದ, ಎಸ್.ಎಂ. ಅಗಡಿ, ಕೊಟ್ರೇಶ ಅಂಗಡಿ, ಎಸ್.ಎನ್. ಪಾಟೀಲ, ಕಾಶೀನಾಥ ಶಿರಬಡಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net