

ಹನೂರು : ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೌಕರರನ್ನು ಆಡಳಿತದ ದೃಷ್ಟಿಯಿಂದ ಹುದ್ದೆಗಳನ್ನು ಬದಲಾವಣೆ ಮಾಡಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಶನಿವಾರ ಆದೇಶಿಸಿದ್ದಾರೆ.
ಪಾರುಪತ್ತೆದಾರ ಮಹದೇವಸ್ವಾಮಿ - ನಾಗಮಲೆ ಭವನದಲ್ಲಿ ಸ್ವಾಗತಕಾರ, ಎಸ್‌ಡಿಎ ಎಂ.ಎನ್.ಶ್ರೀನಿವಾಸ್ ಉಗ್ರಾಣ 1 ಮತ್ತು 2ರಲ್ಲಿ ಕಾರ್ಯ ನಿರ್ವಹಣೆ, ಎಸ್‌ಡಿಎ ಸ್ವಾಮಿ ಅನ್ನ ದಾಸೋಹದ ವ್ಯವಸ್ಥಾಪಕ, ಎಸ್‌ಡಿಎ ಮಹದೇವಸ್ವಾಮಿ - ಲಾಡು ಹಾಗೂ ಪೂಜಾ ವಿಭಾಗದಲ್ಲಿ ಕಾರ್ಯ ನಿರ್ವಹಣೆ, ಎಸ್‌ಡಿಎ ಮಾದೇಶ್ - ಲಾಡು ತಯಾರಿಕ ಘಟಕದಲ್ಲಿ ಉಸ್ತುವಾರಿ, ಮಹೇಶ್ ಮಣೆಗಾರ - ಹಾಲಿ ಕೆಲಸದ ಜತೆಗೆ ಗುರುದರ್ಶಿನಿ ವಿಭಾಗದಲ್ಲಿ ಕಾರ್ಯನಿರ್ವಹಣೆ, ಎಸ್‌ಡಿಎ ಕೆ. ರಮೇಶ್-ಸಿಬ್ಬಂದಿ ವಿಭಾಗದಲ್ಲಿ ಕಾರ್ಯ ನಿರ್ವಹಣೆ, ಟೈಪಿಸ್ಟ್ ಜಿ.ನಾಗರಾಜು - ಬಸ್ ವಿಭಾಗದಲ್ಲಿ ಕೆಲಸದ ಜತೆಗೆ ನ್ಯಾಯಾಲಯದ ಕಡತಗಳ ನಿರ್ವಹಣೆಯ ಉಸ್ತುವಾರಿ, ಬಿ.ಎಂ.ಮಾದರಾಜ ಅರಸ್ ಜಾತ್ರೆ ಹಾಗೂ ಲಘು ವಾಹನಗಳ ವಿಭಾಗದಲ್ಲಿ ಕೆಲಸ ನಿರ್ವಹಣೆ, ಎಚ್.ಬಿ.ಜನಾರ್ದನ - ಹಾಲಿ ಗುತ್ತಿಗೆ ಕರ್ತವ್ಯದ ಜತೆಗೆ ಸಿಬ್ಬಂದಿ ಸಂಪೂರ್ಣ ಉಸ್ತುವಾರಿ, ಸಪ್ಲೈಯರ್ ಎನ್.ನಾಗರಾಜು - ಲಾಡು ತಯಾರಿಕ ಘಟಕದಲ್ಲಿ ಸಹಾಯಕ, ವೇತನ ಶ್ರೇಣಿ ನೌಕರ ನಾಗಶೆಟ್ಟಿ - ನ್ಯಾಯಾಲಯಗಳ ಸಂಪೂರ್ಣ ಕಾರ್ಯನಿರ್ವಹಣೆ, ಹೊರಗುತ್ತಿಗೆ ನೌಕರ ಎಂ. ಮಹೇಶ್‌ಕುಮಾರ್ - ಸಿಬ್ಬಂದಿ ಶಾಖೆಯಲ್ಲಿ ಸಹಾಯಕ, ನಾಗರಾಜು ಅಭಿಷೇಕ ಕೌಂಟರ್‌ನಲ್ಲಿ ಟಿಕೆಟ್ ವಿತರಣೆ ಹಾಗೂ ಎಂ.ಶಿವಕುಮಾರ್ ಪುದುವಟ್ಟು ಕೌಂಟರ್‌ನಲ್ಲಿ ಪುದುವಟ್ಟು ಸ್ವೀಕರಿಸುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.