ನೈತಿಕ ಪರಿವರ್ತನೆಯಿಂದ ಬದಲಾವಣೆ ಸಾಧ್ಯ

08 10 2025_BGR_RURAL-PAGE_5B
ಹೊಸಕೋಟೆ ಎಐಆರ್​ ಬಡಾವಣೆಯಲ್ಲಿ ವಾಲ್ಮೀಕಿ ಭವನವನ್ನು ಶಾಸಕ ಶರತ್​ ಬಚ್ಚೇಗೌಡ ಉದ್ಘಾಟಿಸಿದರು. ಟಿಎಪಿಸಿಎಂಎಸ್​ ಅಧ್ಯಕ್ಷ ಕೋಡಿಹಳ್ಳಿ ಸುರೇಶ್​, ನಗರಸಭೆ ಅಧ್ಯೆ ಆಶಾ ರಾಜಶೇಖರ್​, ಇಒ ಮುನಿಯಪ್ಪ, ಡಿವೈಎಸ್ಪಿ ಮಲ್ಲೇಶ್​ ಇತರರು ಇದ್ದರು.
Published on

ಹೊಸಕೋಟೆ : ವ್ಯಕ್ತಿಯ ಜೀವನ ತನ್ನ ತಪ್ಪಿನಿಂದ ನಿರ್ಧಾರವಾಗುವುದಿಲ್ಲ. ರಾಮಾಯಣ ಬರೆಯುವುದರ ಮೂಲಕ ಸಮಾಜಕ್ಕೆ ಸಂದೇಶ ಕೊಟ್ಟಿರುವ ಮಹರ್ಷಿ ವಾಲ್ಮೀಕಿ ರೀತಿಯ ಬದಲಾವಣೆ ಹಾಗೂ ನೈತಿಕ ಪರಿವರ್ತನೆ ಮೂಲಕ ಜೀವನ ಬದಲಾಯಿಸಿಕೊಂಡಾಗ ಬದುಕು ನಿರ್ಧಾರವಾಗುತ್ತದೆ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು. ನಗರದ ಎಐಆರ್​ ಬಡಾವಣೆಯಲ್ಲಿ 3.5ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ವಾಲ್ಮೀಕಿ ಭವನ ಉದ್ಘಾಟನೆ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು.

ಕಳೆದ ವರ್ಷ ಸೂಲಿಬೆಲೆಯಲ್ಲಿ ವಾಲ್ಮಿಕಿ ಭವನ ಉದ್ಘಾಟನೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಈ ವರ್ಷ ಹೊಸಕೋಟೆಯಲ್ಲಿ ವಾಲ್ಮೀಕಿ ಭವನದ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗಿದೆ. ಇದೀಗ ಸಮುದಾಯ ಭವನದ ಮೇಲ್ಭಾಗದಲ್ಲಿ ಮತ್ತೊಂದು ಮಹಡಿ ನಿರ್ಮಿಸಿ ಸಮುದಾಯದ ಮಕ್ಕಳಿಗೆ ವಿವಿಧ ತರಬೇತಿ ಕೇಂದ್ರಗಳ ಸ್ಥಾಪನೆ ಹಾಗೂ ವಾಲ್ಮೀಕಿ ಭವನಕ್ಕೆ ಲಿಫ್ಟ್​ ಅಳವಡಿಸುವುದಾಗಿ ಭರವಸೆ ನೀಡಿದರು. ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ಸರ್ವ ಸಮುದಾಯಗಳನ್ನು ಸಮಾನವಾಗಿ ಕಾಣುವ ಮೂಲಕ ಬಿ.ಎನ್​.ಬಚ್ಚೇಗೌಡರು ಅಭಿವೃದ್ಧಿಯ ಕೆಲಸ ಮಾಡಿದ್ದರು. ಶಾಸಕ ಶರತ್​ ಬಚ್ಚೇಗೌಡರು ಅವರ ಅಪ್ಪನ ಹಾದಿಯಲ್ಲಿ ಸಾಗುತ್ತಿದ್ದು, ಎಲ್ಲ ಸಮುದಾಯಗಳಿಗೆ ಭವನ ನಿರ್ಮಿಸುವಲ್ಲಿ ಮುಂದಾಗಿದ್ದಾರೆ. ವಾಲ್ಮಿಕಿ ಭವನಕ್ಕೂ ಸರ್ಕಾರದಿಂದ 1 ಕೋಟಿ ಹೆಚ್ಚಿನ ಅನುದಾನ ಕೊಡಿಸುವ ಕೆಲಸ ಮಾಡಿದ್ದಾರೆ ಎಂದರು.

ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭೆ ಅಧ್ಯಕ್ಷ ಬೆಳ್ಳೂರು ಆಂಜಿನಪ್ಪ, ಗಿರಿಜನ ವಾಲ್ಮೀಕಿ ಸಂದ ಅಧ್ಯಕ್ಷ ತವಟಹಳ್ಳಿ ಮುನಿಯಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚಿಕ್ಕಹುಲ್ಲೂರು ಬಚ್ಚೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ಬಿಎಂಆರ್​ಡಿಎ ಸದಸ್ಯ ಡಾ.ಎಚ್​.ಎಂ.ಸುಬ್ಬರಾಜು, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ತಾಪಂ ಮಾಜಿ ಅಧ್ಯಕ್ಷ ಡಾ.ಡಿಟಿ.ವೆಂಕಟೇಶ್​, ತುಮಕೂರು ವಿವಿ ಸಿಂಡಿಕೆಟ್​ ಸದಸ್ಯ ದೇವರಾಜ್​, ಮುಖಂಡರಾದ ಬಿ.ಜಿ.ನಾರಾಯಣಗೌಡ, ಡಾ.ವಿವಿ.ಸದಾನಂದ, ಸಗೀರ್​ ಅಹ್ಮದ್​ ಇತರರು ಇದ್ದರು.

ವಾಲ್ಮೀಕಿ ಸಮುದಾಯದವರ ದಶಕಗಳ ಹೋರಾಟದ ಲವಾಗಿ ನಗರದ ಹೃದಯ ಭಾಗದಲ್ಲಿ ಜಾಗ ಲಭ್ಯವಾಗಿ ವಾಲ್ಮೀಕಿ ಭವನ ನಿರ್ಮಾಣವಾಗಿದೆ. ಶಾಸಕ ಶರತ್​ ಬಚ್ಚೇಗೌಡರ ಇಚ್ಛಾಶಕ್ತಿಯ ಪರಿಣಾಮವಾಗಿ ಭವನಕ್ಕೆ ಹೆಚ್ಚಿನ ಅನುದಾನದಿಂದ ಜಿಲ್ಲೆಯಲ್ಲಿಯೇ ಮಾದರಿ ಭವನ ಇದಾಗಿದೆ. > ಹನುಮರಾಜು ತಾಲೂಕು ವಾಲ್ಮೀಕಿ ಮಹಾಸಭಾ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net