

ವಿಜಯಪುರ: ಆಧುನಿಕ ಜೀವನಶೈಲಿಯ ಭರಾಟೆಯಲ್ಲಿ ಸಿಲುಕಿದ ಮನುಷ್ಯ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ ಎಂದು ಬೆಂಗಳೂರಿನ ರವಿಶಂಕರ ಆಶ್ರಮದ ಪ್ರತಿನಿಧಿ ಬಿ.ಎಂ. ಪಾಟೀಲ ಗುರೂಜಿ ಹೇಳಿದರು.
ನಗರದ ಸಾಯಿ ಸಮರ್ಥನಗರದ ಏಳುಮಕ್ಕಳ ತಾಯಿ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದರ್ಶನ ಕ್ರಿಯಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀವಚನ ನೀಡಿ, ಜಂಜಾಟದ ಜೀವನದಿಂದಾಗಿ ಆಯಾಸ, ಜಿಗುಪ್ಸೆ ಅನುಭವಿಸುವಂತಾಗುತ್ತದೆ. ಅಂಥವರಿಗೆ ಸರಳ ಸುದರ್ಶನ ಕ್ರಿಯೆಯ ಮೂಲಕ ಬದುಕಿನಲ್ಲಿ ಬದಲಾವಣೆ ಹೊಂದಲು ಸಾಧ್ಯ ಎಂದರು.
ಮುಖ್ಯ ಅತಿಥಿ ನೇತ್ರ ತ ಡಾ. ಪ್ರಭುಗೌಡ ಪಾಟೀಲ ಮಾತನಾಡಿ, ಪ್ರತಿಯೊಬ್ಬರು ಒತ್ತಡದ ಬದುಕಿನಿಂದಾಗಿ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ನಂತಹ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದರು.
ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಸೇವಿಸಿ ಎಂದು ಸಲಹೆ ನೀಡಿದರು.
ಜಿಲ್ಲಾ ವಕೀಲರ ಸಂಕ್ಕೆ ಅಯ್ಕೆಯಾದ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಜಿ. ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಎಸ್.ಬಿ. ಸಜ್ಜನ, ಮಲ್ಲನಗೌಡ ಮುರಾಳ, ಗುರುರಾಜ ಇಜೇರಿ, ಶ್ರೀಶೈಲ ಸಾವಳಸಂಗ, ಗುರುನಾಥ ಬಾಗೇವಾಡಿ, ಮಲ್ಲನಗೌಡ ಬಿರಾದಾರ, ಚಂದ್ರಶೇಖರ ಸಿಂಧೂರ, ಮಂಜುಳಾ ಬಗಲಿ, ಸೋಮನಾಥ ಕೊಳಗೇರಿ, ಸಾವಿತ್ರಿ ಬಾಗೇವಾಡಿ ಮತ್ತಿತರರಿದ್ದರು. ಬಡಾವಣೆಯ 100 ಕ್ಕೂ ಅಧಿಕ ಶಿಭಿರಾರ್ಥಿಗಳು ಭಾಗವಹಿಸಿದ್ದರು.