ರಾಜಕೀಯ ಕ್ಷೇತ್ರ ಬದಲಾವಣೆ ಇಂದಿನ ಅಗತ್ಯ

KLG LAD
Published on

ಕಲಘಟಗಿ: ರಾಜಕೀಯ ಕ್ಷೇತ್ರಕ್ಕೆ ನಾನು ದುಡ್ಡು ಮಾಡಲು ಬಂದಿಲ್ಲ. ನಮ್ಮಿಂದ ಸಾವಿರಾರು ಜನರಿಗೆ ಅನುಕೂಲವಾಗಲಿ, ರಾಜಕೀಯ ವ್ಯವಸ್ಥೆ ಬದಲಾವಣೆಯಾಗಲಿ, ಸಾಮಾಜಿಕ ನ್ಯಾಯ ನೀಡಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂದು ಎಂದು ಕಾರ್ವಿುಕ ಸಚಿವ ಸಂತೋಷ ಲಾಡ್ ಹೇಳಿದರು.

ಪಟ್ಟಣದ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಸಂತೋಷ ಲಾಡ್ ಫೌಂಡೇಷನ್ ವತಿಯಿಂದ ತಮ್ಮ 50ನೇ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ್ದ ತಾಲೂಕಿನ ಪದವಿ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ, ಆಶಾ ಹಾಗೂ ಗ್ರಾಪಂ ಸಖಿಯರಿಗೆ 3 ಸಾವಿರ ರೂ. ಧನ ಸಹಾಯ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚೆಗೆ ಕೆಲವು ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿ ಹರಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿವೆ. ಯುವಕರು ಇಂತಹ ಸುದ್ದಿಗಳಿಗೆ ಕಿವಿಗೊಡದೆ ಅಂಬೇಡ್ಕರ್ ದೇಶಕ್ಕೆ ನೀಡಿರುವ ಸಂವಿಧಾನ ಅಧ್ಯಯನ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ದಾನ, ಧರ್ಮ ಮಾಡಲು ಹೆಚ್ಚಿನ ಶ್ರೀಮಂತಿಕೆ ಬೇಕಾಗಿಲ್ಲ. ಸಹಾಯ ಮಾಡುವ ಮನಸ್ಥಿತಿ ಹಾಗೂ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಜಿಪಂ ಸಿಇಒ ಭುವನೇಶ ಪಾಟೀಲ, ತಹಸೀಲ್ದಾರ್ ವೀರೇಶ ಮುಳುಗುಂದಮಠ, ತಾಪಂ ಇಒ ಪರಶುರಾಮ ಸಾವಂತ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಪಪಂ ಅಧ್ಯಕ್ಷೆ ಶಿಲ್ಪಾ ಪಾಲ್ಕರ, ಸಂತೋಷ್ ಲಾಡ್ ಫೌಂಡೇಷನ್ ಅಧ್ಯಕ್ಷ ಆನಂದ ಕಲಾಲ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಆರ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಹರಿಶಂಕರ ಮಠದ, ಬಾಬು ಅಂಚಟಗೇರಿ, ರಾಮಣ್ಣ ಬಂಡಿವಡ್ಡರ, ಸೋಮಶೇಖರ ಬೆನ್ನೂರು, ನರೇಶ ಮಲೇನಾಡು, ಬಿ.ವೈ. ಪಾಟೀಲ, ಬಾಳು ಖಾನಾಪುರ, ಅಜ್ಮತ ಜಾಗೀರದಾರ, ಕುಮಾರ ಖಂಡೇಕರ, ರಾಘವೇಂದ್ರ ಭೀಮಪ್ಪನವರ, ಮಲ್ಲೇಶ ನೂಲ್ವಿ, ಮಣಬಸಪ್ಪ ಗಂಜಿಗಟ್ಟಿ, ಯಲ್ಲಪ್ಪ ಹಾರೋಗೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net