ಶಿಕ್ಷಣದಿಂದಲೇ ಬದುಕಿನಲ್ಲಿ ಬದಲಾವಣೆ

29 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇವರುಗಳಿಗೆ ಹರಕೆ ಹೊತ್ತರೆ ಬದುಕು ಬದಲಾಗುವುದಿಲ್ಲ. ಬದುಕಿನ ಬದಲಾವಣೆಗೆ ಶಿಣವೇ ಕಾರಣ. ಇದಕ್ಕೆ ಡಾ.ಬಿ.ಆರ್​. ಅಂಬೇಡ್ಕರ ಬದುಕು ಬಹಳ ದೊಡ್ಡ ನಿದರ್ಶನ ಎಂದು ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ್​ ಹೇಳಿದರು.
ನಗರದ ಭಗವಾನ್​ ಬುದ್ಧ ಪ್ರತಿಷ್ಠಾನ ಟ್ರಸ್ಟ್​, ಗಣಕರಂಗ ಹಾಗೂ ಬಹಿಷತ ಹಿತಕಾರಣಿ ಸಭಾ ಮತ್ತು ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಏರ್ಪಡಿಸಿದ್ದ ಬುದ್ಧ ರ್ಪೂಣಿಮೆ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ಧನ ಜೀವನ ಮತ್ತು ತತ್ವಗಳಿಗೆ ಮನಸೋತು ಶಿಣ ಪಡೆದು ಜ್ಞಾನಸೂರ್ಯನಾಗಿ ಲೋಕ ಬೆಳಗಿದ ಡಾ.ಬಿ.ಆರ್​. ಅಂಬೇಡ್ಕರ್​ ಅವರ ಜ್ಞಾನರಥ ಚಲಿಸುತ್ತಿದೆ. ಈ ಜ್ಞಾನವನ್ನು ಶೋಷಿತ ಜನ ಸಮುದಾಯಗಳ ಬದುಕಿನ ಬದಲಾವಣೆಗೆ ಬಳಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಬಾಗಲಕೋಟೆಯ ಬಂತೆ ಧಮ್ಮಪಾಲ ಹಾಗೂ ಧಾರವಾಡದ ಪಬ್ಬಜ್ಜೋರವಿತಿಪಾಲಿವಿಜ್ಜಾಮುನಿಯೋ ಮಾತನಾಡಿ, ಬುದ್ಧನ ತತ್ವಗಳಿಗೆ ಮಾತ್ರ ಜಗತ್ತನ್ನು ಬೆಳಗಬಲ್ಲ ಶಕ್ತಿ ಇದೆ. ಆತನ ಜೀವನ ಬಹಳ ದೊಡ್ಡ ಸಂದೇಶ ನೀಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಧನವಂತ ಹಾಜವಗೋಳ ಮಾತನಾಡಿ, ಬುದ್ಧನ ಜೀವನ ಮತ್ತು ಡಾ.ಅಂಬೇಡ್ಕರ್​ ಬದುಕನ್ನು ಆಳವಾಗಿ ಅಧ್ಯಯನ ಮಾಡಿದರೆ ಬದುಕು ಬದಲಾಗುತ್ತದೆ. ಅವರ ತತ್ವಗಳನ್ನು ಅನುಸರಿಸಿ, ಅನುದಿನದ ಬದುಕಿನಲ್ಲಿ ಆಚರಿಸಬೇಕು ಎಂದರು.
ರಾಜೀವ ಕೃಷ್ಣ ಮೇತ್ರಿ, ಧಾರವಾಡ ಆಕಾಶವಾಣಿ ಸಹಾಯಕ ನಿರ್ದೇಶಕ ಹೇಮಂತ್​ ರಾಮಡಗಿ ಹಾಗೂ ಹಿರಿಯ ಸಾಹಿತಿ ಸಿ.ಎಂ ಚನ್ನಬಸಪ್ಪ ಅವರಿಗೆ ಸನ್ಮಾನಿಸಲಾಯಿತು.
ಡಾ. ಸದಾಶಿವ ರ್ಮಜಿ, ಡಾ.ಅನಿಲ ಮೇತ್ರಿ, ಸಿದ್ದರಾಮ ಹಿಪ್ಪರಗಿ, ಡಾ. ಪ್ರಕಾಶ ಮಲ್ಲಿಗವಾಡ, ಗಾಳೆಮ್ಮನವರ ಭಾಗ್ಯಶ್ರೀ, ಸೈಯದ್​ ಎಂ.ಎ. ತಂಡದವರು ಸಾಂಸತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ಸದಾಶಿವ ರ್ಮಜಿ, ಡಾ.ಸುಭಾಷ ನಾಟಿಕಾರ, ಡಾ. ಮಂಜುನಾಥ, ಶರಣಪ್ಪ ಹೊಸಮನಿ, ಆರ್​.ಎನ್​. ಬೇವಿನಕಟ್ಟಿ, ಚಂದ್ರಕಾಂತ ದೊಡ್ಡಮನಿ, ಕಮಲದಿನ್ನಿ, ವೈ.ಬಿ.ಚಲವಾದಿ, ಇತರರು ಇದ್ದರು.
ಡಾ.ಪ್ರಕಾಶ ಮಲ್ಲಿಗವಾಡ ಸ್ವಾಗತಿಸಿದರು. ಡಾ.ಅರುಣ ಕಲ್ಲೋಳಿಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದರಾಮ ಹಿಪ್ಪರಗಿ ನಿರೂಪಿಸಿದರು. ಡಾ.ಅನಿಲ ಮೇತ್ರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net