ಬದುಕಿನ ಮೌಲ್ಯದೊಂದಿಗೆ ವರ್ತನೆಯಲ್ಲಿ ಬದಲಾವಣೆ

smruti
Published on

ಪಡುಬಿದ್ರಿ: ಪಾಲಕರೇ ಮಕ್ಕಳಿಗೆ ಬಿಗ್ ಬಾಸ್ ಆಗಬೇಕು ವಿನಹ ಸಿನಿಮಾ ನಟರಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಮಕ್ಕಳ ವರ್ತನೆಯಲ್ಲಿ ಬದಲಾವಣೆ ತರಬೇಕು ಎಂದು ಬೆಂಗಳೂರು ಆರ್‌ಎನ್‌ಎಸ್ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಧೀರ್ ಪೈ ಕೆ.ಎಲ್. ಹೇಳಿದರು.

ಕಟಪಾಡಿ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ಅಮೃತ ಸ್ಮೃತಿ ಅಮೃತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಟಪಾಡಿ ಎಸ್‌ವಿಎಸ್ ಸಮೂಹ ಶಿಕ್ಷಣ ಸಂಸ್ಥೆ ಸಂಚಾಲಕ ಕೆ.ಸತ್ಯೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಪ್ರಬಂಧಕ ಗುರುರಾಜ ಆಚಾರ್ಯ, ಉಡುಪಿ ಕನ್ಸಲ್ವೆಂಟ್ ಆರ್ಥೋಪೆಡಿಕ್ ಸರ್ಜನ್ ಡಾ.ಕೆ.ಸುರೇಶ್ ಶೆಣೈ, ಕಾಪು ತಾಲ್ಲಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಜಾನಪದ ಸಾಹಿತಿ ಕ್ಯಾಥರಿನ್ ರೊಡ್ರಿಗಸ್ ಕಟಪಾಡಿ, ರೋಟರಿ ವಲಯ ಸಹಾಯಕ ಗವರ್ನರ್ ಜಗನ್ನಾಥ್ ಕೋಟೆ, ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎ.ರವೀಂದ್ರನಾಥ್ ಶೆಟ್ಟಿ, ಕಾಲೇಜು ಮಾಜಿ ಸಂಚಾಲಕ ಕೆ.ಮಹೇಶ್ ಶೆಣೈ, ಶಿರ್ವ ಫೈಜಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಖಾಲಿದ್ ಮೊಹಮ್ಮದ್, ಕೋಟೆ ಗ್ರಾಪಂ ಅಧ್ಯಕ್ಷ ಪ್ರಮೀಳಾ ಜತ್ತನ್, ಕಟಪಾಡಿ ಪೇಟೆಬೆಟ್ಟು ಕ್ಷೇತ್ರ ಗುರಿಕಾರ ಹರಿಶ್ಚಂದ್ರ, ಹಳೇ ವಿದ್ಯಾರ್ಥಿ ಸುನೀಲ್ ಕಿಣಿ, ತ್ರಿಶಾ ಕಾಲೇಜಿನ ಸಂಚಾಲಕ ಸಿ.ಎ ಗೋಪಾಲಕೃಷ್ಣ ಭಟ್, ಜಿಪಂ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಮಾಜಿ ಸಂಚಾಲಕ ವಸಂತ್ ಮಾಧವ ಭಟ್, ಆಡಳಿತ ಮಂಡಳಿ ಸದಸ್ಯ ಗಣೇಶ್ ಕಿಣಿ, ಕಟಪಾಡಿ ಎಸ್‌ವಿಎಸ್ ಪ್ರೌಢಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ತಂತ್ರಿ, ಉಪನ್ಯಾಸಕಿ ಅಂಜನಾ ಪೈ, ಶಿಕ್ಷಕಿಯರಾದ ವಿದ್ಯಾ, ವಿಜಯ, ಜಯಲಕ್ಷ್ಮೀ ಕೆ. ಮತ್ತಿತರರು ಉಪಸ್ಥಿತರಿದ್ದರು.

ನಿವೃತ್ತ ಪ್ರಾಂಶುಪಾಲರು, ಉಪನ್ಯಾಸಕರು, ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಕಟಪಾಡಿ ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ದಯಾನಂದ ಪೈ ಸ್ವಾಗತಿಸಿದರು. ಶಿಕ್ಷಕ ಪಟ್ಲ ಸಂತೋಷ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಭಾಸ್ಕರ ಕಾಮತ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net