ಗುಣಮಟ್ಟಕ್ಕೆ ಹೆಸರಾದ ಚಂದುಕಾಕಾ  ಜುವೆಲ್ಸ್

Chandukaka Jewels, known for its quality
Chandukaka Jewels, known for its quality
Published on

ರಬಕವಿ/ಬನಹಟ್ಟಿ: ವಿಭಿನ್ನ ಮತ್ತು ವಿವಿಧ ಮಾದರಿಯ ಗುಣಮಟ್ಟದ ಬಂಗಾರದ ಆಭರಣಗಳು ರಬಕವಿ ಹಜಾರೆ ಬಜಾರ್‌ನಲ್ಲಿರುವ ಚಂದುಕಾಕಾ ಸರ್ಾ ಜುವೆಲ್ಸ್‌ನಲ್ಲಿ ಸಿಗುತ್ತವೆ ಎಂದು ಚಂದುಕಾಕಾ ಸರ್ಾ ಮಾಲೀಕರ ಮೊಮ್ಮಗ ಸಿದ್ಧಾರ್ಥ ಶಹಾ ಹೇಳಿದರು.

ರಬಕವಿ ಸತೀಶ ಹಜಾರೆ ನೇತೃತ್ವದ ಹಜಾರೆ ಬಜಾರ್‌ನ ಬೃಹತ್ ಮಹಲ್‌ನಲ್ಲಿ ಚಂದುಕಾಕಾ ಸರ್ಾ ಜುವೆಲ್ಸ್ ಮಳಿಗೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಇದು ಚಂದುಕಾಕಾ ಸರ್ಾ ಜುವೆಲ್ಸ್‌ನ 4ನೇ ಅತಿ ದೊಡ್ಡ ಶಾಖೆಯಾಗಿದೆ. ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಿದ ಸಂಸ್ಥೆ ಇದಾಗಿದೆ. ಗ್ರಾಮೀಣ ಭಾಗದ ಜನರು ವಿನೂತನ ಮಾದರಿಯ ಬಂಗಾರದ ಆಭರಣಗಳನ್ನು ಕೊಂಡುಕೊಳ್ಳಲು ದೊಡ್ಡ ದೊಡ್ಡ ನಗರಗಳಿಗೆ ಹೋಗಬೇಕಾಗಿತ್ತು. ಬಂಗಾರ ಪ್ರಿಯರಿಗೆ ಅನುಕೂಲ ಕಲ್ಪಿಸಲು ಹಜಾರೆ ಬಜಾರ್ ಮಳಿಗೆಯಲ್ಲಿ ಚಂದುಕಾಕಾ ಸರ್ಾ ಜುವೆಲ್ಸ್ ಆರಂಭಿಸಲಾಗಿದೆ. ಈ ಭಾಗದ ಜನರು ಫಿದಾ ಆಗಿದ್ದಾರೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದಕ್ಕೆ ನಮಗೂ ಸಂತಸವಾಗಿದೆ ಎಂದರು.

ಹಜಾರೆ ಬಜಾರ್ ಮಾಲೀಕ ಸತೀಶ ಹಜಾರೆ ಮಾತನಾಡಿ, ಒಂದು ಬೃಹತ್ ಬಂಗಾರದ ಅಂಗಡಿ ಪ್ರಾರಂಭಿಸುವ ಕನಸು ನನಸಾಗಿದೆ. ಪ್ರಾರಂಭದ ದಿನವೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಂತಸ ತಂದಿದೆ ಎಂದರು.

ಚಂದುಕಾಕಾ ಸರ್ಾ ಜುವೆಲ್ಸ್‌ನ ನೂತನ ಮಳಿಗೆಗೆ ಚಾಲನೆ ನೀಡಿದ ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಮಾತನಾಡಿ, ರಬಕವಿ ನಗರದಲ್ಲಿ ಚಂದುಕಾಕಾ ಜುವೆಲ್ಸ್ ಮಳಿಗೆ ಪ್ರಾರಂಭಿಸಿದ್ದು ಬಂಗಾರ ಖರೀದಿದಾರರಿಗೆ ಸಂತಸ ಉಂಟು ಮಾಡಿದೆ. ಈ ಸಂಸ್ಥೆಯ ವ್ಯಾಪಾರ ಅಭಿವೃದ್ಧಿಯಾಗಿ ಉತ್ತರೋತ್ತರವಾಗಿ ಬೆಳೆಯಲಿ ಎಂದು ಆಶೀರ್ವದಿಸಿದರು.

ಗಣಪತರಾವ ಹಜಾರೆ, ಅತುಲ್ ಶಹಾ, ಸಂಗೀತಾ ಶಹಾ, ಆದಿತ್ಯ ಶಹಾ, ಸುಹಾಸ್ ಪಾಗಿ, ಪದ್ಮಾವತಿ ಹಜಾರೆ, ಪ್ರಭಾವತಿ ಹಜಾರೆ, ರಾಣಿ ಹಜಾರೆ, ಶಾಸಕ ಸಿದ್ದು ಸವದಿ, ಅಲ್ಲಪ್ಪ ಗುಂಜಿಗಾಂವಿ, ಜಿನೇಂದ್ರ ಕುಳ್ಳೊಳ್ಳಿ, ಮಾರುತಿ ಘನಥಡೆ, ಪ್ರವೀಣ ಹಜಾರೆ, ರಾಜು ಸಾಬೋಜಿ, ರಾಮಣ್ಣ ಹುಲಕುಂದ, ಡಾ. ಜಿ. ಎಚ್.ಚಿತ್ತರಗಿ, ಶ್ರೀಶೈಲ ದಲಾಲ, ಸಂಜು ತೆಗ್ಗಿ, ಅಮಿತ್ ನಾಶಿ, ವಿಜು ನಾಶಿ, ಶೇಖರ ಕೊಟ್ರಶೆಟ್ಟಿ, ಮಲ್ಲಿಕಾರ್ಜುನ ಕುಚನೂರ, ಡಾ. ರವಿ ಜಮಖಂಡಿ, ಸಂಜು ತೇಲಿ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net