

ಧಾರವಾಡ: ಬೇರೆ ಪ್ರದೇಶದ ಕೊಳಚೆ ನೀರನ್ನು ಸಾಗಿಸಲು ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಲಕಮನಹಳ್ಳಿಯ ಚಂದ್ರಿಕಾ ಬಡಾವಣೆ ನಿವಾಸಿಗಳು ವಲಯ 12ರ ಸಹಾಯಕ ಆಯುಕ್ತರಿಗೆ ಗುರುವಾರ ಮನವಿ ಸಲ್ಲಿಸಿದರು.
ಚಂದ್ರಿಕಾ ಬಡಾವಣೆಯಲ್ಲಿನ ಒಳಚರಂಡಿಗಳು ಮುಚ್ಚಿ ಹೋಗಿವೆ. ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿದು ಇಲ್ಲಿನ ನಿವಾಸಿಗಳು ಕೆಸರಿನಲ್ಲಿ ಓಡಾಡುತ್ತಾರೆ. ಅಲ್ಲದೆ, ಚಂದ್ರಿಕಾ ಬಡಾವಣೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ರಸ್ತೆ, ಚರಂಡಿ, ಒಳಚರಂಡಿ ಹಾಗೂ ಬೀದಿದೀಪದ ನಿರ್ವಹಣೆ ಇಲ್ಲ. ಈ ಬಗ್ಗೆ ಹಲವು ಬಾರಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಹೀಗಿರುವಾಗ ಬಡಾವಣೆಯ ನಾಗರಿಕರ ಗಮನಕ್ಕೆ ತರದೆ, ಬೇರೆ ಪ್ರದೇಶದ ನೀರನ್ನು ಸಾಗಿಸಲು ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಇದರಿಂದ ಚಂದ್ರಿಕಾ ಬಡಾವಣೆಯೂ ಕೊಳಚೆ ಪ್ರದೇಶವಾಗಲಿದೆ. ಆದ್ದರಿಂದ ಕೂಡಲೇ ಕಾಮಗಾರಿ ನಿಲ್ಲಿಸಬೇಕು ಎಂದು ನಿವಾಸಿಗಳು ವಲಯ 12ರ ಕಚೇರಿ ಅಽÃಕ್ಷಕ ಆನಂದ ಅನಂತಪುರ ಅವರಿಗೆ ಮನವಿ ಸಲ್ಲಿಸಿದರು.
ಎಸ್.ಎನ್. ಚವ್ಹಾಣ, ಸಂದೀಪ ಮೇಸ್ತಿç, ಪ್ರದೀಪ ಅಕ್ಕಣ್ಣವರ, ಇತರರಿದ್ದರು.