ವಿ ಚಂದ್ರಿಕಾ ಪುಸ್ತಕ ಬಿಡುಗಡೆ

CHANDRIKA NEW
Published on

ಹುಬ್ಬಳ್ಳಿ : ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಆಶ್ರಯದಲ್ಲಿ ಶುಕ್ರವಾರದಂದು ಮೂರುಸಾವಿರ ಮಠದ ಸಭಾ ಭವನದಲ್ಲಿ ವಿ ಚಂದ್ರಿಕಾ ಪುಸ್ತಕ ಬಿಡುಗಡೆ ಮಾಡಲಾಯಿತು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ವೀಣಾ ಹೆಗಡೆ, ಹುಬ್ಬಳ್ಳಿಯ ಗಣೇಶೋತ್ಸವವು ಯಾವುದೇ ಜಾತಿ, ಮತ, ಪಂಥ ಎನ್ನದೆ ಮೇಲೂ, ಕೀಳು ಎಂಬ ಭಾವನೆ ಇಲ್ಲದೆ ಸೋದರತ್ವ ಭಾವನೆಯಿಂದ ಹಬ್ಬ ಆಚರಣೆ ಮೂಲಕ ರಾಜ್ಯದಲ್ಲಿ ಹೆಸರು ಪಡೆದಿದೆ ಎಂದರು.

ಮಹಾ ಮಂಡಳವು ವಿ ಚಂದ್ರಿಕಾ ಎಂಬ ಪುಸ್ತಕದಿಂದ ಒಳ್ಳೆ ವಿಚಾರಗಳು ಹಾಗೂ ಸಾಹಿತ್ಯ ಕುರಿತು ಯುವ ಜನರಲ್ಲಿ ಆಸಕ್ತಿ ಬರುವಂತೆ ಮಾಡಿದೆ ಎಂದರು.

ಅತಿಥಿಯಾಗಿದ್ದ ನ್ಯಾಯವಾದಿ ಸವಿತಾ ಚಂದನಮಟ್ಟಿ ಮಾತನಾಡಿ, ಗಣೇಶ ಹಬ್ಬವು ಮಾನವೀಯ ಮೌಲ್ಯಗಳನ್ನು ಬೆಳೆಸಿ ಕೊಳ್ಳಲು ಒಂದು ಸುವರ್ಣ ಅವಕಾಶವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿ ಚಂದ್ರಿಕಾ ಸಂಪಾದಕರಾದ ಸರಸ್ವತಿ ಮೇಹರವಾಡೆ ಮಾತನಾಡಿ, ವಿ ಚಂದ್ರಿಕಾ ಪುಸ್ತಕದಲ್ಲಿ ಜನರಿಗೆ ಅಗತ್ಯ ಇರುವ ಒಳ್ಳೆಯ ಮಾಹಿತಿಗಳು, ವಿಚಾರಗಳು ಇವೆ ಎಂದು ತಿಳಿಸಿದರು.

ಅಕ್ಕಮ್ಮ ಕಂಬಳಿ, ಸ್ಮಿತಾ ಸಂಕಣ್ಣವರ, ರೇಖಾ ಆಪ್ಟೆ, ರತ್ನಾ ಬಸಾಪುರ, ಪುಷ್ಪಾ ಹಿತ್ತಾಳೆ, ಸಂಗೀತಾ ಜಡಿ, ವಿಜಯಲಕ್ಷಿ ಹಿರೇಮಠ, ಗಾಯತ್ರಿ ಕೊಂಗಿ, ಸುಧಾ ಮಲ್ಲಾಪುರ, ಸಂಗೀತಾ ದೇವದಾಸ, ಗಾಯತ್ರಿ ನೆಲ್ಲಿಕೊಪ್ಪ, ಡಾ. ಮಂಜುಳಾ ಕಮ್ಮಾರ, ಗೀತಾ ದಿವಟೆ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net