ಚಂದ್ರಯಾನ ಯಶಸ್ಸು ‘ದೇಶದ ಹೆಮ್ಮೆಯ ಪ್ರತೀಕ’

bandi
Published on

ಗಜೇಂದ್ರಗಡ: ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿರುವುದು ಭಾರತೀಯರಿಗೆ ಅತ್ಯಂತ ಸಂತೋಷದಾಯಕ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ವೀರಶೈವ ಲಿಂಗಾಯತ ಸಮಾಜದ ಗಜೇಂದ್ರಗಡ ಪಟ್ಟಣದ ಅಧ್ಯಕ್ಷ ಸಿದ್ದಪ್ಪ ಬಂಡಿ ಅಭಿಪ್ರಾಯಪಟ್ಟರು.

ಪಟ್ಟಣದ ಮೈಸೂರು ಮಠದಲ್ಲಿ ಬುಧವಾರ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಏರ್ಪಡಿಸಿದ ಚಂದ್ರಯಾನ -3 ಸಂಭ್ರಮಚರಣೆಯಲ್ಲಿ ವಿಜ್ಞಾನಿಗಳಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.

ದೇಶದ ವಿಜ್ಞಾನಿಗಳ ನಿರಂತರ ಪರಿಶ್ರಮ ಫಲ ನೀಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಧನೆಗಳನ್ನು ಜಗತ್ತು ಬೆರಗುಗಣ್ಣಿನಿಂದ ನೋಡುವಂತಾಗಿದೆ. ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣ ಎಂದರು.

ಪ್ರಭು ಚವಡಿ, ಎ.ಪಿ.ಗಾಣಿಗೆರ, ಶಿವಕುಮಾರ ಕೊರಧಾನ್ಯಮಠ, ಅಪ್ಪು ಮತ್ತಿಕಟ್ಟಿ, ಪ್ರಭು ಹಿರೇಮಠ, ಮಲ್ಲಯ್ಯಸ್ವಾಮಿ ಗುರುಸ್ಥಳಮಠ, ಬಸವರಾಜ ಚನ್ನಿ, ಶಿವಯ್ಯ ಚಕ್ಕಡಿಮಠ, ಅಮರಯ್ಯ ಗೌರಿಮಠ, ವಿಶ್ವನಾಥ ಕುಷ್ಟಗಿ, ಮುತ್ತಣ್ಣ ಮೆಣಸಿನಕಾಯಿ, ರಾಕೇಶ ಮಾರನಬಸರಿ, ಸುನೀಲ ನಂದಿಹಾಳ, ಶ್ರೀಕಾಂತ ತಾಳಿಕೋಟಿ, ಬಸವರಾಜ ರೇವಡಿ, ಅಕ್ಷಯ ಬಂಡಿ, ವೀರೇಶ ಸಂಗಮದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net