

ಗದಗ : ನಗರದ ತೋಂಟದಾರ್ಯ ಶಾಲೆಯ ವಿದ್ಯಾರ್ಥಿ ಸಮೂಹ ಹಾಗೂ ಶಿಕ್ಷಕರು ಮುಂಜಾನೆ ಚಂದ್ರಯಾನ-೩ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿ ಈ ಉಡಾವಣೆಯಲ್ಲಿ ಮೊದಲಿನಿಂದಲೂ ಕಾರ್ಯನಿರತರಾದ ಇಸ್ರೋದ ವಿಜ್ಞಾನಿಗಳಿಗೆ ಬಿಗ್ ಸಲಾಮ್ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಕೊಟ್ರೇಶ ಮೆಣಸಿನಕಾಯಿ ಮಾತನಾಡುತ್ತಾ ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋದ ವಿಜ್ಞಾನಿಗಳು ಚಂದ್ರಯಾನ-೩ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಮೂಲಕ ಲ್ಯಾಂಡಿAಗ್ ಆಗುವಂತೆ ಯೋಜನಾಬದ್ಧವಾಗಿ ಶ್ರಮಪಟ್ಟು ಈ ಉಡಾವಣೆಯನ್ನು ಮಾಡಿದ್ದಾರೆ. ಇದೊಂದು ಇಸ್ರೋದ ಇತಿಹಾಸದಲ್ಲೆ ಐತಿಹಾಸಿಕ ದಾಖಲೆಯಾಗಲಿದೆ. ಜಗತ್ತಿನ ಎಲ್ಲಾ ರಾಷ್ಟçಗಳು ನಮ್ಮ ಭಾರತ ದೇಶವನ್ನು ಹಾಗೂ ನಮ್ಮ ವಿಜ್ಞಾನಿಗಳನ್ನು ತಿರುಗಿ ನೊಡುವಂತಹ ರೋಚಕ ಸಮಯ ಬಂದಿದೆ ನಾವೆಲ್ಲಾ ಭಾರತೀಯರು ಹೆಮ್ಮೆ ಪಡುವ ಸಂಭ್ರಮದ ದಿನ ಇಂದು ಆಗಲಿದೆ ಎಂದು ಮಾತನಾಡಿದರು.
ಶಾಲೆಯ ವಿದ್ಯಾರ್ಥಿಗಳು ಇಸ್ರೋದ ವಿಜ್ಞಾನಿಗಳಿಗೆ ಹಾಗೂ ಚಂದ್ರಯಾನ-೩ ಇದಕ್ಕೆ ಘೋಷಣೆಗಳನ್ನು ಕೂಗಿ ಆಲ್ ದಿ ಬೆಸ್ಟ್ ಎಂದು ಸಂಭ್ರಮ ಹಂಚಿಕೊAಡರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ನಾಗರಾಜ ಗಾಳಿ, ಮಧುಮತಿ ಬಂಡಿವಾಡ, ಕೃಷ್ಣಾ ಗೌಡರ, ಸಂತೋಷಕುಮಾರ ಕಟ್ಟಿಮನಿ, ಅಮೃತ ರೋಣದ ಹಾಗೂ ಶಾಲೆಯ ವಿದ್ಯಾರ್ಥಿಗಳು ಇತರೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.