ಜಗತ್ತಿನ ಗಮನ ಸೆಳೆದ ಚಂದ್ರಯಾನ

HKR flag
Published on

ಹಿರೇಕೆರೂರ: ದೇಶ ಅಭಿವೃದ್ಧಿ ಪಥದತ್ತ ಸಾಗಿದ್ದು, ಇಂದು ಚಂದ್ರಯಾನ-3 ನ ಮೇಲೆ ಅತಿ ಕಡಿಮೆ ವೆಚ್ಚದಲ್ಲಿ ಕಾಲಿರಿಸುವ ಮಹತ್ವವಾದ ಕಾರ್ಯಕ್ಕೆ ಮುಂದಾಗಿರುವುದು ಜಗತ್ತೆ ನಮ್ಮ ಕಡೆ ನೋಡುವಂತೆ ಮಾಡಿದೆ ಎಂದು ತಹಸೀಲ್ದಾರ್ ಡಾ.ಪ್ರಭಾಕರಗೌಡ ಎಚ್. ಹೇಳಿದರು.

ಪಟ್ಟಣದ ಪೊಲೀಸ್ ಮೈದಾನದಲ್ಲಿ ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಇಂದಿನ ಯುವಕರಿಗೆ ರಾಷ್ಟ್ರಾಭಿಮಾನ, ಶ್ರದ್ಧೆ, ಗುರು ಹಿರಿಯರಿಗೆ ಗೌರವ ನೀಡುವುದನ್ನು ಕಲಿಸುವುದು ಅತ್ಯಂತ ಅವಶ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಯು.ಬಿ. ಬಣಕಾರ ಮಾತನಾಡಿ, ಅನೇಕ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯದ ಒಂದು ದಿನದ ಆಚರಣೆಯಾಗಬಾರದು. ಪ್ರತಿಯೊಬ್ಬರೂ ದೇಶದ ಏಳಿಗೆಗೆ ತಮ್ಮದೇ ಆದ ಕೊಡುಗೆ ನೀಡಬೇಕು. ವಿವಿಧತೆಯಲ್ಲಿ ಏಕತೆ ಭಾರತದ ಮುಖ್ಯ ಸತ್ವ ಮತ್ತು ಶಕ್ತಿ. ಜನಸಾಮಾನ್ಯರ ಕೈಯಲ್ಲಿ ಅಧಿಕಾರವಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದಾಗಿದೆ ಎಂದರು.

ಇದೇ ವೇಳೆ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ತಾಪಂ ಇಒ ಶಶಿಧರ್.ಎಚ್., ಸಿಪಿಐ ಬಸವರಾಜ.ಪಿ.ಎಸ್, ಬಿಇಒ ಎನ್.ಶ್ರೀಧರ್, ಪ.ಪಂ. ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ, ಮಂಜುನಾಥ ತಂಬಾಕದ, ಹನುಮಂತಗೌಡ ಭರಮಣ್ಣನವರ, ಎನ್.ಸುರೇಶಕುಮಾರ, ಚಂದ್ರು ಉಣಕಲ್ ಪ.ಪಂ. ಸದಸ್ಯರು, ಅಧಿಕಾರಿಗಳು, ಶಿಕ್ಷಕರು ಇದ್ದರು. ಕಂದಾಯ ನಿರೀಕ್ಷಕ ನಾಗರಾಜ ಕಟ್ಟಿಮನಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net