

ಶಾಲಾ, ಕಾಲೇಜುಗಳಲ್ಲಿ ನೇರ ಪ್ರಸಾರ ವೀಕ್ಷಣೆ
ಹೊಸಪೇಟೆ: ಚಂದ್ರನ ಅಂಗಳದಲ್ಲಿ ಭಾರತದ ವಿಕ್ರಂ ಲ್ಯಾಂಡರ-೩ ಯಶಸ್ವಿಯಾಗಿ ಕಾಲಿಡುತ್ತಿದ್ದಂತೆ ಹೊಸಪೇಟೆ ಸೇರಿದಂತೆ ವಿಜಯನಗರ ಜಿಲ್ಲೆಡೆ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಹಲವೆಡೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರೆ, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಪರಸ್ಪರ ಸಿಹಿ ತಿನಿಸಿ ಸಂತಸವನ್ನು ಹಂಚಿಕೊAಡರು.
ಇಸ್ರೋ ಪೂರ್ವ ನಿಗದಿಯಂತೆ ಬುಧವಾರ ಸಂಜೆ ೬ ಗಂಟೆಗೆ ವಿಕ್ರಂ ಲ್ಯಾಂಡರ್ ನೆಲೆನಿಂತು, ರೂವರ್ ಹೊರಬನರುವ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಜನರು ಟಿವಿ ವಾಹಿನಿಗಳ ಮುಂದೆ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದರು.
ವಿಜ್ಞಾನ ಕಾಲೇಜಿನಲ್ಲಿ ಸಂಭ್ರಮಾಚರಣೆ:
ಚAದ್ರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಪಾದಾರ್ಪಣೆಯ ಅಭೂತಪೂರ್ವ ದೃಶ್ಯ ವೀಕ್ಷಣೆ ಹಾಗೂ ಮಕ್ಕಳಲ್ಲಿ ಬಾಹ್ಯಾಕಾಶದ ಚಿಂತನೆಗಳನ್ನು ಬಿತ್ತುವ ಉದ್ದೇಶದಿಂದ ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಕಾಲೇಜಿನ ೬ ತರಗತಿ ಕೊಠಡಿಗಳಲ್ಲಿ ತಲಾವೊಂದು ಟಿವಿಯಲ್ಲಿ ದಿಗ್ವಿಜಯ ವಾಹಿನಿಯಲ್ಲಿ ನೇರ ಪ್ರಸಾರವನ್ನು ಕಣ್ತುಂಬಿಕೊAಡರು. ಚಂದ್ರನ ಮೇಲ್ಮಮೈ ಮೇಲೆ ಲ್ಯಾಂಡರ್ ಕಾಲೂರುತ್ತಿದ್ದಂತೆ ವಿದ್ಯಾರ್ಥಿಗಳು ಎದ್ದುನಿಂತು ಗೌರವ ಸಲ್ಲಿಸಿದರು. ಲ್ಯಾಂಡರ್‌ನಲ್ಲಿ ತ್ರಿವರ್ಣ ಧ್ವಜ ಮೂಡುತ್ತಿದ್ದಂತೆ ವಿದ್ಯಾರ್ಥಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಚಪ್ಪಾಳೆ ತಟ್ಟುವ ಮೂಲಕ ಇಸ್ರೋ ಸಾಧನೆಗೆ ಅಭಿನಂದನೆ ಸಲ್ಲಿಸಿದರು.
ಕಬ್ಬೇರಪೇಟೆ ಶಾಲೆ:
ನಗರದ ಕಬ್ಬೇರಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು ಚಂದ್ರಯಾನ- ೩ ಯಶಸ್ವಿಯ ಕ್ಷಣಗಳ ನೇರ ಪ್ರಸಾರವನ್ನು ವೀಕ್ಷಿಸುವ ಮೂಲಕ ಸಂಭ್ರಮಿಸಿದರು.
ಇದಕ್ಕೂ ಮುನ್ನ ಶಾಲೆಯ ಮುಖ್ಯಗುರು ಕಡ್ಲಿ ವೀರಭದ್ರೇಶ್ ಮಾತನಾಡಿ, ಚಂದ್ರಯಾನ-೩ ಉದ್ದೇಶ ಮತ್ತು ಕಾರ್ಯವೈಖರಿಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ನಗರಸಭಾ ಸದಸ್ಯ ಕೆ.ಗೌಸ್, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಕಂಪ್ಲಿ ಪಾಲ್ಗೊಂಡಿದ್ದರು.
ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳದ ವರ್ಗ ಸೇರಿದಂತೆ ಜಿಲ್ಲೆಯಲ್ಲಿರುವ ಮೆಟ್ರಿಕ್ ಪೂರ್ವ ಮತ್ತು ನಂತರ ಸೇರಿದಂತೆ ಸುಮಾರು ೮೦ಕ್ಕೂ ಹೆಚ್ಚು ವ¸ತಿ ನಿಲಗಳಲ್ಲಿ ಚಂದ್ರಯಾನ- ೩ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಚಂದ್ರಯಾನ-೩ ಯಶಸ್ವಿಗೊಳಿಸಿರುವ ಇಸ್ರೋ ಸಾಧನೆ ಎಲ್ಲ ಭಾರತೀಯರ ಹೆಮ್ಮೆ. ಚಂದ್ರನಲ್ಲಿ ಮಾನವ ಬದುಕಿಗೆ ಇರುವ ಅವಕಾಶಗಳು ಸೇರಿದಂತೆ ಅನೇಕ ಬಗೆಯ ಸಂಶೋಧನೆಗೆ ಇಂದು ಮುನ್ನುಡಿ ಬರೆದಿದೆ. ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊAಡಿದ್ದಕ್ಕೆ ನಮಗೆ ಅತೀವ ಸಂತಸವಾಗುತ್ತಿದೆ. -ಪ್ರೀತಿ, ದ್ವಿತೀಯ ಪಿಯು ವಿದ್ಯಾರ್ಥಿ, ವಿಜ್ಞಾನ ಕಾಲೇಜು, ಹೊಸಪೇಟೆ