

ರಟ್ಟಿಹಳ್ಳಿ: ಚಂದ್ರಯಾನ 3 ಯಶಸ್ವೀ ಉಡಾವಣೆಯ ಹಿನ್ನೆಲೆಯಲ್ಲಿ ಸ್ಥಳೀಯ ಪಿ.ವಿ.ಎಸ್. ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಾಷ್ಟ್ರಧ್ವಜದೊಂದಿಗೆ ವಿಜಯೋತ್ಸವ ಆಚರಿಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹರೀಶಕುಮಾರ ಪವಾರ ಮಾತನಾಡಿ, ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಅತ್ಯಂತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಯು ರಾಷ್ಟ್ರದ ಗೌರವವನ್ನು ಹೆಚ್ಚುವಂತೆ ಮಾಡಿದೆ ಎಂದರು.
ಮುಖ್ಯ ಶಿಕ್ಷಕ ಪರಶುರಾಮ ಪವಾರ, ಸಹಶಿಕ್ಷಕರುಗಳಾದ ಮಧುಮತಿ ಉಜ್ಜಪ್ಪನವರ, ಸೋನಿ ಐರಣಿ, ಭಾವನಾ ಐರಣಿ, ಮೀನಾಕ್ಷಿ ಪ್ಯಾಟಿಗೌಡ್ರ, ಶೋಭಾ ಜಿ. ಹಾಗೂ ಅಟೆಂಡರ್ ವಿದ್ಯಾ ಉಪಸ್ಥಿತರಿದ್ದರು.