ಅ.3ರಂದು ಚಂದ್ರವನ ಆಶ್ರಮದಲ್ಲಿ ಪ್ರಶಸ್ತಿ ಪ್ರದಾನ: ಟ್ರಸ್ಟ್‌ನ ಕಾರ್ಯದರ್ಶಿ ಶಿವಕುಮಾರ್ ಮಾಹಿತಿ

Chandravan Ashram Trust Secretary Press Conference Mandya
Published on

ಮಂಡ್ಯ: ಶ್ರೀ ಮಹಂತ ಶಿವಯೋಗಿ ಮಠ ಟ್ರಸ್ಟ್ ವತಿಯಿಂದ ಶ್ರೀರಂಗಪಟ್ಟಣ ತಾಲೂಕು ಡಿ.ಎಂ.ಎಸ್ ಚಂದ್ರವನ ಆಶ್ರಮದಲ್ಲಿ ಚಂದ್ರವನ ನವರಾತ್ರಿ ಉತ್ಸವದ ಅಂಗವಾಗಿ ಅ.3ರಂದು ನವರಾತ್ರಿ ಸಮಾರೋಪ ಸಮಾರಂಭ ನಡೆಯಲಿದೆ. ಈ ವೇಳೆ ಕಾವೇರಿ ಪ್ರಶಸ್ತಿ ಪ್ರದಾನ, ಮಹಿಳೆಯರಿಗೆ ಮಡಿಲಕ್ಕಿ ವಿತರಣೆ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.

ಅ.1ರಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು 9 ದಿನಗಳ ಪೂರ್ಣಾಹುತಿ ಹೋಮ ನೆರವೇರಿಸುವರು. 2ರಂದು ಸಂಜೆ 6ಕ್ಕೆ ಬನ್ನಿಪೂಜೆ ನಡೆಯಲಿದ್ದು, 3ರಂದು ಬೆಳಗ್ಗೆ 11ಗಂಟೆಗೆ ನವರಾತ್ರಿ ಸಮಾರೋಪ ಸಮಾರಂಭವಿರಲಿದೆ. ಅ.2ರಂದು ನಡೆಯಲಿರುವ ಬನ್ನಿಪೂಜೆಯ ರಥೋತ್ಸವಕ್ಕೆ ಸಂಜೆ 5ಕ್ಕೆ ಕಾಂಗ್ರೆಸ್ ಮುಖಂಡ ವೆಂಕಟರಮಣಗೌಡ(ಸ್ಟಾರ್ ಚಂದ್ರು) ಚಾಲನೆ ನೀಡಲಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಬನ್ನಿಪೂಜೆ ನೆರವೇರಿಸಲಿದ್ದು, ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಡಾ.ವಿ.ಭಾನುಪ್ರಕಾಶ್‌ಶರ್ಮ, ಮಾಯಕಾರ ಗುರುಕುಲ ಸಂಸ್ಥಾಪಕ ಡಾ.ಮೂಗೂರು ಮಧುದೀಕ್ಷಿತ್ ಆಗಮಿಸಲಿದ್ದಾರೆ. ಈ ವೇಳೆ ಹಲವು ಗಣ್ಯರು ಉಪಸ್ಥಿತರಿರಲಿದ್ದು, ರಂಗರಾಂ ಆರ್ಟ್ ಫೌಂಡೇಷನ್‌ನ ಡಾ.ಎಂ.ಎಸ್.ವಿದ್ಯಾಲಕ್ಷ್ಮೀ ತಂಡದಿಂದ ಭರತನಾಟ್ಯ ನೆರವೇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

3ರಂದು ನಡೆಯಲಿರುವ ಸಮಾರೋಪ ಸಮಾರಂಭದ ಸಾನಿಧ್ಯವನ್ನು ಬೇಬಿ ಮಠದ ಪೀಠಾಧಿಪತಿ ಡಾ.ತಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ವಹಿಸಲಿದ್ದು, ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಉದ್ಘಾಟಿಸುವರು. ಶಾಸಕ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಕಾವೇರಿ ಪ್ರಶಸ್ತಿ ಪ್ರದಾನ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪಿರಮಿಡ್ ಧ್ಯಾನಕೇಂದ್ರ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ದೇವಾಲಯದ ಮುಂಭಾಗದ ಪ್ರಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.

ಟ್ರಸ್ಟ್‌ನ ಕೆ.ಎಸ್.ಷಡಕ್ಷರಿ, ಚಿಕ್ಕಮಾದು, ಕೃಷ್ಣಪ್ಪ, ಎಂ.ಎಸ್.ಶಿವಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net