ಕೆ.ಎಸ್. ಚಂದ್ರಶೇಖರ್ ದಂಪತಿಗೆ ಸನ್ಮಾನ

7mdk10
ಕೊಡಗು ಜಿಲ್ಲೆಯಿಂದ ರಾಜ್ಯ ವಿಶ್ವಕರ್ಮ ಸಮಾಜದ ನಿರ್ದೇಶಕರಾಗಿ, ರಾಜ್ಯ ವಿಶ್ವಕರ್ಮ ಸಮಾಜದ ಕಾನೂನು ಸಲಹೆಗಾರರಾಗಿ ನೇಮಕಗೊಂಡ ಕೂಡಿಗೆಯ ಕೆ.ಎಸ್.ಚಂದ್ರಶೇಖರ್ ದಂಪತಿಯನ್ನು ಕುಶಾಲನಗರ ವಿಶ್ವಕರ್ಮ ಸಮಾಜದ ವತಿಯಿಂದ ಗೌರವಿಸಲಾಯಿತು. ಎಚ್.ಬಿ.ಲಿಂಗಮೂರ್ತಿ, ಸಿ. ದುರ್ಗೇಶ್, ಎಚ್.ಬಿ.ರಾಜಮೂರ್ತಿ, ವಿ.ಕುಮಾರ್, ಹೆಚ್.ಎನ್. ನಾಗಾಚಾರಿ , ಕೆ.ಬಿ.ಮೋಹನ್ ಮತ್ತಿತರರು ಇದ್ದರು.
Published on

ಕುಶಾಲನಗರ: ಕೊಡಗು ಜಿಲ್ಲೆಯಿಂದ ರಾಜ್ಯ ವಿಶ್ವಕರ್ಮ ಸಮಾಜದ ನಿರ್ದೇಶಕರಾಗಿ, ರಾಜ್ಯ ವಿಶ್ವಕರ್ಮ ಸಮಾಜದ ಕಾನೂನು ಸಲಹೆಗಾರರಾಗಿ ನೇಮಕಗೊಂಡ ಕೂಡಿಗೆಯ ಕೆ.ಎಸ್. ಚಂದ್ರಶೇಖರ್ ದಂಪತಿಯನ್ನು ಕುಶಾಲನಗರ ವಿಶ್ವಕರ್ಮ ಸಮಾಜದ ವತಿಯಿಂದ ಸೋಮವಾರ ಗೌರವಿಸಲಾಯಿತು. ಕೆ.ಎಸ್. ಚಂದ್ರಶೇಖರ್, ಕೊಡಗು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ದಿ. ಕೆ.ಬಿ. ಶಂಕರ್ ಆಚಾರ್ ಅವರ ಪುತ್ರನಾಗಿದ್ದು ಸಮಾಜಕ್ಕೆ ಕೀರ್ತಿ ತಂದಿರುವ ಬಗ್ಗೆ ಶ್ಲಾಘನೆ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್.ಬಿ.ಲಿಂಗಮೂರ್ತಿ, ಉಪಾಧ್ಯಕ್ಷ ಸಿ.ದುರ್ಗೇಶ್, ಕಾರ್ಯದರ್ಶಿ ಎಚ್.ಬಿ.ರಾಜಮೂರ್ತಿ, ಗೌರವಾಧ್ಯಕ್ಷ ವಿ.ಕುಮಾರ್, ಮಾಜಿ ಕಾರ್ಯದರ್ಶಿ ಎಚ್.ಎನ್.ನಾಗಾಚಾರಿ, ಮಾಜಿ ಕಾರ್ಯದರ್ಶಿ ಕೆ.ಬಿ. ಮೋಹನ್, ಸದಸ್ಯರಾದ ದಿನೇಶ್ ಕುಮಾರ್, ಎಚ್.ಎಸ್.ಸೋಮಶೇಖರ, ಎಚ್.ಎಸ್.ನಾಗಣ್ಣಾಚಾರ್, ಕೂಡ್ಲೂರ್ ಕುಮಾರ್, ದಕ್ಷಿಣ ಮೂರ್ತಿ, ಎಚ್.ಜಿ.ಸೋಮಶೇಖರ, ಎಚ್.ಎನ್.ಸದಾನಂದ, ಪುಟ್ಟರಾಜು, ಎಸ್.ದಿನೇಶ್ ಆಚಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net