

ಲಕ್ಷ್ಮೇಶ್ವರ: ತಾಲೂಕಿನ ದೊಡ್ಡೂರ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಚಂದ್ರಶೇಖರ ಈಳಗೇರ ಅಧ್ಯಕ್ಷರಾಗಿ ಹಾಗೂ ಸುಶೀಲಾ ಲಮಾಣಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 15 ಸದಸ್ಯರನ್ನು ಹೊಂದಿರುವ್ದ ದೊಡ್ಡೂರ ಗ್ರಾಪಂ ಚುನಾವಣೆ ಪ್ರಕ್ರಿಯೆಯಲ್ಲಿ 12 ಜನ ಸದಸ್ಯರು ಭಾಗವಹಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ಈಳಗೇರ ಹಾಗೂ ಮಧುಮತಿ ಈಳಗೇರ ಸ್ಪರ್ಧಿಸಿದ್ದರು. ಚಂದ್ರಶೇಖರ ಈಳಗೇರ ಅವರು 10 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಮಧುಮತಿ ಈಳಗೇರ ಕೇವಲ 2 ಮತ ಪಡೆದು ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಸುಶೀಲಾ ಲಮಾಣಿ ಹಾಗೂ ಇಂದ್ರವ್ವ ಲಮಾಣಿ ಸ್ಪರ್ಧಿಸಿದ್ದರು. ಸುಶೀಲಾ ಲಮಾಣಿ 9 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರೆ ಪ್ರತಿಸ್ಪರ್ಧಿ 3 ಮತ ಪಡೆದರು. ಚುನಾವಣಾಧಿಕಾರಿಯಾಗಿ ತಾಪಂ ಇಒ ಕೃಷ್ಣಪ್ಪ ಧರ್ಮರ ಕಾರ್ಯನಿರ್ವಹಿಸಿದರು. ಬಿ.ಎಸ್.ಈಳಗೇರ, ಕೃಷ್ಣ ಲಮಾಣಿ, ಅಮರಪ್ಪ ಗುಡಗುಂಟಿ, ಪುಂಡಲೀಕ ಲಮಾಣಿ, ಸದಸ್ಯರು ಇದ್ದರು.