ಚಂದ್ರಶೇಖರ ಶಿವಾಚಾರ್ಯರ ಬೆಂಬಲ ಸ್ಮರಣೀಯ

8Huk2-Web
ಹುಕ್ಕೇರಿ ಪಟ್ಟಣದ ಹಿರೇಮಠದಲ್ಲಿ ಜಯಬಸವ ಮೃತ್ಯುಂಜಯ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಚಂದ್ರಶೇಖರ ಶಿವಾಚಾರ್ಯರು, ಮಾಜಿ ಎಂಎಲ್‌ಸಿ ಸೋಮಣ್ಣ ಬೇವಿನಮರದ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಗುಂಡು ಪಾಟೀಲ ಇತರರಿದ್ದರು.
Published on

ಹುಕ್ಕೇರಿ: ಸಮಾಜದ ಬಡವರಿಗಾಗಿ ನಡೆದ ಮೀಸಲಾತಿ ಹೋರಾಟದಲ್ಲಿ ಚಂದ್ರಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ಗುರು ವಿರಕ್ತರು ಬೆಂಬಲಿಸಿದ್ದು ಸ್ಮರಣೀಯ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಇತ್ತೀಚೆಗೆ ನಡೆದ ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಭಾಗಿಯಾದ ಹಾಗೂ ಬೆಂಬಲಿಸಿದ ಸಮಾಜ ಬಾಂಧವರಿಗೆ ಕೃತಜ್ಞತೆ ಸಲ್ಲಿಸಲು, ಪಟ್ಟಣದ ಶ್ರೀ ಗುರು ಶಾಂತೇಶ್ವರ ಹಿರೇಮಠದ ಮಠದ ದರ್ಬಾರ್ ಹಾಲ್‌ನಲ್ಲಿ ಗುರುವಾರ ಜರುಗಿದ ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚಂದ್ರಶೇಖರ ಶಿವಾಚಾರ್ಯರು ಜಯ ಮೃ ತ್ಯುಂಜಯ ಸ್ವಾಮೀಜಿ ಅವರನ್ನು ಸನ್ಮಾನಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಹುಕ್ಕೇರಿ ತಾಲೂಕಾ ಅಧ್ಯಕ್ಷ ಶಿವಗೌಡ(ಗುಂಡು) ಪಾಟೀಲ, ಮುಖಂಡರಾದ ಬಾಲಾಜಿ, ಸುಭಾಷ ನಾಯಿಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net