ಚಂದ್ರಗಿರಿ ಚಂದ್ರಮ್ಮದೇವಿ ಜಾತ್ರಾ ಮಹೋತ್ಸವ

amt 6-1 jatre
ಆಲಮಟ್ಟಿ ಸಮೀಪದ ಚಂದ್ರಗಿರಿ ಚಂದ್ರಮ್ಮದೇವಿ ಜಾತ್ರಾ ಮಹೋತ್ಸವ ನಿಮಿತ್ತ ಭಕ್ತರು ದೇವಿ ದರ್ಶನ ಪಡೆದರು.
Published on

ಆಲಮಟ್ಟಿ: ಈ ಭಾಗದ ಆರಾಧ್ಯ ದೈವ ಚಂದ್ರಗಿರಿ ಚಂದ್ರಮ್ಮ ದೇವಿ ಜಾತ್ರಾ ಮಹೋತ್ಸವ ಗುರುವಾರ ಆರಂಭಗೊಂಡಿತು.

ಜಾತ್ರೆ ಅಂಗವಾಗಿ ದೇವಿಗೆ ವಿಶೇಷ ಪೂಜೆ, ನೈವೇದ್ಯ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು. ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಕೃಷ್ಣಾ ನದಿಯಲ್ಲಿ ಪವಿತ್ರ ಸ್ನಾನಗೈದು ದೇವಸ್ಥಾನವರೆಗೆ ಧೀಡ್ ನಮಸ್ಕಾರ ಹಾಕಿದರು. ಬೆಳಗ್ಗೆಯಿಂದಲೇ ರಾತ್ರಿಯವರೆಗೂ ಸಹಸ್ರಾರು ಭಕ್ತರು ಒಂದು ಕಿಮೀವರೆಗೂ ಸರದಿ ಸಾಲಿನಲ್ಲಿ ನಿಂತು ಹರಕೆ ಸಲ್ಲಿಸಿ, ಉಡಿ ತುಂಬಿದರು. ಪ್ರತಿ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿ ಕೃಪೆಗೆ ಪಾತ್ರರಾದರು.

ಖರೀದಿ ಜೋರು: ಜಾತ್ರೆ ನಿಮಿತ್ತ ಒಂದು ಕಿಲೋ ಮೀಟರ್‌ವರೆಗೆ ವಿವಿಧ ಸಾಮಗ್ರಿಗಳ ಅಂಗಡಿಗಳನ್ನು ಹಾಕಲಾಗಿತ್ತು. ವಿವಿಧ ಲಂಬಾಣಿ ಉಡುಗೆಗಳು, ಬಿದರಿನ ಬುಟ್ಟಿಗಳು, ಚಿನ್ನವನ್ನು ನಾಚಿಸುವಂತೆ ಬಂಗಾರ ವರ್ಣದ ಚೈನ್, ಲಾಕೆಟ್, ಉಂಗುರ ಸೇರಿ ಮತ್ತಿತರ ಸಾಮಗ್ರಿಗಳ ಮಾರಾಟದಲ್ಲಿ ವ್ಯಾಪಾರಸ್ಥರು ತೊಡಗಿದ್ದರು. ಮಕ್ಕಳ ವಿವಿಧ ಆಟಿಕೆ ಸಾಮಾನು, ಬಳೆ ಮತ್ತಿತರ ವಸ್ತುಗಳ ಮಾರಾಟ ಜೋರಾಗಿತ್ತು. ಚಕ್ರಗಾಣ, ಮನರಂಜನೆ ಆಟಗಳು ಗಮನಸೆಳೆದವು. ಜಾತ್ರೆ ನಿಮಿತ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net