ಚಂದ್ರಭೂಪಾಲ್ ವಿರುದ್ಧ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್.ಮಧುಕುಮಾರ್ ಕಿಡಿ

18 smg Madhu kumar
ಮಧುಕುಮಾರ್
Published on

ಶಿವಮೊಗ್ಗ: ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಎಂದು ಹೇಳಿಕೊಂಡಿರುವ ಸಿ.ಎಸ್.ಚಂದ್ರಭೂಪಾಲ್ ಸಮಾಜದ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ಕೂಡಲೇ ಬಹಿರಂಗವಾಗಿ ಸಮಾಜದ ಕ್ಷಮೆಯಾಚಿಸಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್.ಮಧುಕುಮಾರ್ ಆಗ್ರಹಿಸಿದರು.

ಚಂದ್ರಭೂಪಾಲ್ ಮಡಿವಾಳ ಸಂಘದಿಂದ ಅಮಾನತುಗೊಂಡಿದ್ದು, ಇದೀಗ ಹೊಸದಾಗಿ ಕಟ್ಟಿಕೊಂಡಿರುವ ಸಂಘಕ್ಕೆ ಯಾವುದೇ ಮಾನ್ಯತೆ ಇಲ್ಲ. ಅಧಿಕೃತವಾಗಿರುವ ಸಂಘದಲ್ಲಿ ಮೂರು ಲಕ್ಷ ರೂ. ಅವ್ಯವಹಾರ ನಡೆದಿದೆ ಎಂದು ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಂದ್ರಭೂಪಾಲ್ ಅವರು ಸಮಾಜದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಅವರು ಸಂಘವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜಿಲ್ಲಾ ಮಡಿವಾಳ ಸಮಾಜ ಅಧಿಕೃತ ಸಂಘವಾಗಿದೆ. ಸರ್ವ ಸದಸ್ಯರ ಸಭೆ ಕರೆಯಲಾಗಿದೆ. ಲೆಕ್ಕ ಪರಿಶೋಧನೆಗೆ ವರದಿ ಸಲ್ಲಿಸಲಾಗಿದೆ. ಹಣ ದುರುಪಯೋಗವಾಗಿಲ್ಲ. ಆದರೂ ಸುಳ್ಳು ಆರೋಪ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಎಚ್.ಎಸ್.ಸದಾಶಿವಪ್ಪ, ಪದಾಧಿಕಾರಿಗಳಾದ ಗಣೇಶ್, ಸುಧೀರ್, ಬಾಬಣ್ಣ, ಮಂಜಣ್ಣ, ನಾಗರಾಜ್, ಪರಶುರಾಮಪ್ಪ, ಚಂದ್ರಶೇಖರ್, ಮಂಜುನಾಥ್, ಹುಚ್ಚಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net