ಚಂದ್ರಭೂಪಾಲ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಜಿಲ್ಲಾಧ್ಯಕ್ಷ

c.s.chandrabupal
ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್
Published on

ಶಿವಮೊಗ್ಗ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರನ್ನಾಗಿ ಕೆಪಿಸಿಸಿ ರಾಜ್ಯ ಸಂಯೋಜಕ ಸಿ.ಎಸ್.ಚಂದ್ರಭೂಪಾಲ್ ಸೇರಿ 22 ಜನರ ಸಮಿತಿಯನ್ನು ಎರಡು ವರ್ಷದ ಅವಧಿಗೆ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಶಿವಮೊಗ್ಗ ಕೆ.ಆರ್.ಪುರಂನ ಅಫ್ತಾಬ್ ಪರ್ವೇಜ್, ಬಾಪೂಜಿನಗರದ ಆರ್.ಶಿವಣ್ಣ, ಭದ್ರಾವತಿ ತಾಲೂಕಿನ ಅರಳಹಳ್ಳಿಯ ಎಸ್.ಮಲ್ಲಿಕಾರ್ಜುನಪ್ಪ, ಬಸವರಾಜಪ್ಪ ಡಿ.ಬಿ.ಹಳ್ಳಿ (ಉಪಾಧ್ಯಕ್ಷರು) ಹಾಗೂ ಎಡಿಸಿ ಸಿದ್ದಲಿಂಗ ರೆಡ್ಡಿ (ಸದಸ್ಯ ಕಾರ್ಯದರ್ಶಿ)ನೇಮಕವಾಗಿದ್ದಾರೆ.
ಶಿವಮೊಗ್ಗದ ಎಚ್.ಎಂ.ಮಧು, ಹೊಸನಗರ ಮಾರುತಿಪುರ ಗ್ರಾಮದ ಚಿದಂಬರ, ಭದ್ರಾವತಿ ಅರಳಿಹಳ್ಳಿ ಮಣಿಶೇಖರ, ಸೊರಬ ಅಂಕರವಳ್ಳಿ ಜಯಶೀಲಪ್ಪಗೌಡ, ತೀರ್ಥಹಳ್ಳಿ ಕೆಂದಾಳ್‌ಬೈಲ್‌ನ ಎನ್.ಜಿ.ಶಚೀಂದ್ರ ಹೆಗಡೆ, ಸಾಗರ ಬಿ.ಆರ್.ಜಯಂತ್, ಶಿಕಾರಿಪುರದ ಎಸ್.ಪಿ.ನಾಗನಗೌಡ(ನಾಗರಾಜ್ ಗೌಡ), ರಿಪ್ಪನ್‌ಪೇಟೆ ಅಮೀರ್ ಅಮ್ಜಾ, ಸೊರಬ ಶಿಗ್ಗಾದ ಎಸ್.ಪ್ರಭಾಕರ್, ಸಾಗರದ ಭವ್ಯಾ ಕೃಷ್ಣಮೂರ್ತಿ, ಶಿವಮೊಗ್ಗದ ಎಂ.ರಾಹುಲ್, ಯಾಲಕಪ್ಪನಕೇರಿ ಮುಖ್ಯ ರಸ್ತೆಯ ಅರ್ಚನಾ, ನವುಲೆ ಎಸ್.ಎನ್.ವಿಜಯಕುಮಾರ್, ಯು.ಶಿವಾನಂದ, ತೀರ್ಥಹಳ್ಳಿ ಬಸವಾನಿಯ ಕೆ.ಉದಯಕುಮಾರ್ ಸದಸ್ಯರಾಗಿ ನೇಮಕವಾಗಿದ್ದಾರೆ.
ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಮತ್ತು ಯುವನಿಧಿ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಪ್ರಾಧಿಕಾರ ರಚನೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net