ಚಂದ್ರ ವೀರ್ ರಮಣ್ ಆರ್‌ಡಬ್ಲುಎಫ್​ ಹೊಸ ಜಿಎಂ

Vijayavani-Featured-Image
Published on

ಬೆಂಗಳೂರು: ಯಲಹಂಕದ ರೈಲು ಗಾಲಿ ಕಾರ್ಖಾನೆಯ (ಆರ್‌ಡಬ್ಲುಎಫ್​) ನೂತನ ಮಹಾ ಪ್ರಬಂಧಕರಾಗಿ ಐಆರ್‌ಎಸ್ ಅಧಿಕಾರಿ ಚಂದ್ರ ವೀರ್ ರಮಣ್ ಅವರು ಬುಧವಾರ (ಅ.16) ಅಧಿಕಾರ ವಹಿಸಿಕೊಂಡರು.

ಆರ್‌ಡಬ್ಲುಎಫ್​ ಹಾಲಿ ಜಿಎಂ ಆಗಿದ್ದ ಆರ್. ರಾಜಗೋಪಾಲ್ ಅವರು ರೈಲ್ವೆ ಮಂಡಳಿಯ ಮಾನವ ಸಂಪನ್ಮೂಲ ವಿಭಾಗದ ಮಹಾ ನಿರ್ದೇಶಕರಾಗಿ ಬಡ್ತಿ ಹೊಂದಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಚಂದ್ರ ವೀರ್ ರಮಣ್ ನೇಮಕಗೊಂಡ ಬೆನ್ನಲ್ಲೇ ಅಧಿಕಾರ ವಹಿಸಿಕೊಂಡಿದ್ದಾರೆ.

ಭಾರತೀಯ ರೈಲ್ವೆಯ ಆಡಳಿತಾತ್ಮಕ ಕಾರ್ಯಗಳಲ್ಲಿ ಹೆಚ್ಚಿನ ಅನುಭವ ಹೊಂದಿರುವ ಚಂದ್ರ ವೀರ್ ರಮಣ್ 36 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಮಹಾ ಪ್ರಬಂಧಕ, ವಿಭಾಗೀಯ ರೈಲ್ವೆ ಪ್ರಬಂಧಕ, ಪ್ರಧಾನ ಕಾರ್ಯನಿರ್ವಹಣಾ ನಿರ್ದೇಶಕ, ಕಾರ್ಯನಿರ್ವಾಹಕ ನಿರ್ದೇಶಕ ಸಹಿತ ಇತರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net