ವಂದಿಗೆ ರಸ್ತೆಯಲ್ಲಿ ಚಂದ್ರ ಮಂಡಲ ದರ್ಶನ!

Vandige Road
Published on

ಅಂಕೋಲಾ: ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯ ಪುನರ್ ನಿರ್ವಣದ ಕುರಿತು ವಂದಿಗೆ ಗ್ರಾಮಸ್ಥರು ಇಲಾಖೆಯ ಎದುರಿಗೆ ಜಮಾಯಿಸಿ ಬುಧವಾರ ಎಇಇ ಅವರಿಗೆ ಮನವಿ ಸಲ್ಲಿಸಿದರು.

ವಂದಿಗೆ ಗ್ರಾಪಂ.ವ್ಯಾಪ್ತಿಯಲ್ಲಿ ಬರುವ 1 ಕೀ.ಮೀ ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ಈ ರಸ್ತೆಗೆ ಕಳೆದ 25 ವರ್ಷಗಳ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ನಂತರದಲ್ಲಿ ಯಾವುದೇ ರಿಪೇರಿ ಆಗಿಲ್ಲ. ಈಗ ಆ ರಸ್ತೆಯು ತುಂಬಾ ಹದಗೆಟ್ಟಿದ್ದು, ದ್ವಿಚಕ್ರ ವಾಹನಗ ಳಲ್ಲಿ ಸಂಚಾರ ಮಾಡಲು ಮತ್ತು ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಮತ್ತು ಮಕ್ಕಳು ಹೊಂಡ ತಪ್ಪಿಸಿ ಹೋಗುಲು ಬಹಳ ತೊಂದರೆಯಾಗಿದೆ. ಇದರಿಂದ ಈ ರಸ್ತೆಗೆ ಮರು ಡಾಂಬರೀಕರಣ ಮಾಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ.

ಇಲಾಖೆಯ ಕಿರಿಯ ಇಂಜಿನಿಯರ್ ಸುಧೀೕರ ನಾಯ್ಕ ಮನವಿ ಸ್ವೀಕರಿಸಿದರು. ರಂಜಿತ ರಾಮದಾಸ ನಾಯಕ, ವಿಘ್ನೕಶ ರಾಮಚಂದ್ರ ನಾಯಕ, ಹರೀಶ ದೇವಣ್ಣ ನಾಯಕ, ಹೊನ್ನಪ್ಪ ನಾರಾಯಣ ನಾಯಕ, ನಾರಾಯಣ ವಿ.ನಾಯಕ, ಉದಯ ರಾಕು ನಾಯಕ, ದಾಸ ರಾಮಚಂದ್ರ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net