ಆಚಾರ್ಯ ಕುಟೀರದಲ್ಲಿ ಚಂಡಿಕಾಯಾಗ

chandika
Published on

ನವರಾತ್ರಿ ಉತ್ಸವದಲ್ಲಿ ದುರ್ಗಾದೇವಿಗೆ ಪಂಚಾಮೃತಾಭಿಷೇಕ

ನೆಲಮಂಗಲ: ನಗರದ ಚನ್ನಪ್ಪ ಬಡಾವಣೆಯಲ್ಲಿನ ಆಚಾರ್ಯ ಕುಟೀರದಲ್ಲಿ ನವರಾತ್ರಿ ಹಾಗೂ ಲೋಕಕಲ್ಯಾಣಾರ್ಥವಾಗಿ ಆಯೋಜಿಸಿದ್ದ ಚಂಡಿಕಾಯಾಗ ವಿಜೃಂಭಣೆಯಿಂದ ನೆರವೇರಿತು.
ಶ್ರೀವಿಜಯಕುಮಾರ ಗುರೂಜಿ ನೇತೃತ್ವದಲ್ಲಿ ನವರಾತ್ರಿ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮೊದಲಿಗೆ ವಿಘ್ನ ನಿವಾರಕ ಗಣಪತಿ ಹಾಗೂ ದುರ್ಗಾದೇವಿಗೆ ಪಂಚಾಮೃತಾಭಿಷೇಕ, ಅರಿಶಿನ, ಕುಂಕುಮ ಗಂಧಾಭಿಷೇಕ ಮಾಡಿದರೆ, ನವರಾತ್ರಿ ಪಯುಕ್ತ ಪ್ರತಿಷ್ಠಾಪಿಸಿರುವ ಗೌರಿ, ಲಕ್ಷ್ಮೀ, ಸರಸ್ವತಿ, ಪರಿವಾರ ದೇವತೆಗಳಾದ ಶ್ರೀದೇವಿಭೂದೇವಿ ಸಮೇತ ವೆಂಕಟೇಶ್ವರ, ಕಾಲಬೈರವೇಶ್ವರ, ಪಾರ್ವತಿಪರಮೇಶ್ವರ, ಭದ್ರಕಾಳಿ, ಆಂಜನೇಯ ದೇವರುಗಳಿಗೂ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.


ಚಂಡಿಕಾ ಯಾಗ: ನವರಾತ್ರಿ ಹಾಗೂ ಲೋಕಕಲ್ಯಾಣಾರ್ಥ ಆಯೋಜಿಸಿದ್ದ ಚಂಡಿಕಾಯಾಗವನ್ನು 7 ಅಧ್ಯಾಯಗಳ ದುರ್ಗಾಸಪ್ತಶತಿ ಪಾರಾಯಣದ ಮೂಲಕ ಶ್ರೀಸತ್ಯಪ್ರಮೋಧಾಚಾರ್ ನೆರವೇರಿಸಿದರು. ದುರ್ಗಾಷ್ಠಮಿ ಪೂಜೆಯಲ್ಲಿ ಬೆಂಗಳೂರು ನಗರ ಸೇರಿ ನೆಲಮಂಗಲದ ನೂರಾರು ಜನ ಪಾಲ್ಗೊಂಡಿದ್ದು, ದೇವಿಯ ದರ್ಶನ ಪಡೆದರು.
ನಗರಸಭೆ ಅಧ್ಯಕ್ಷೆ ಎನ್.ಎಸ್.ಪೂರ್ಣಿಮಾ ಸುಗ್ಗರಾಜು, ಸದಸ್ಯ ಎನ್.ಗಣೇಶ್, ಸಿ.ಪ್ರದೀಪ್, ಸೇವಾಕರ್ತರಾದ ಎನ್.ಎಂ.ಹರೀಶ್‌ಕುಮಾರ್, ಭಾಸ್ಕರ್, ಆಚಾರ‌್ಯ ಸುದರ್ಶನ್, ಶ್ರೀನಾಥ್, ನವರಾತ್ರಿ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸೊಂಡೇಕೊಪ್ಪ ರಮೇಶ್, ಖಜಾಂಚಿ ಉದ್ಯಮಿಮಂಜುನಾಥ್, ಸಹಕಾರ್ಯದರ್ಶಿ ವೃಕ್ಷಮಹೇಶ್, ಸದಸ್ಯ ಪ್ರಮೋದ್‌ಕುಮಾರ್, ರವಿಕುಮಾರ್, ಕೆ.ಸಿ.ಕುಮಾರ್, ಮಂಜುಳಾಗಣೇಶ್, ಪ್ರೇಮಾಹರೀಶ್, ಪ್ರೇಮಾರವಿಕುಮಾರ್, ಮಂಜುಳಾಮಹೇಶ್, ನವೀನ್, ದರ್ಶನ್, ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು.

ಸಾಮೂಹಿಕ ಪ್ರಾರ್ಥನೆ
ರಾಜ್ಯಕ್ಕೆ ಬಂದೊದಗಿರುವ ಬರಗಾಲ ದೂರ ಮಾಡಿ ಆರೋಗ್ಯ ಕರುಣಿಸುವಂತೆ, ಸಕಾಲಕ್ಕೆ ಮಳೆಯಾಗಿ ಸಮೃದ್ಧ ಬೆಳೆಯಾಗಿ ಅನ್ನದಾತ ರೈತರು, ಸಮಸ್ತ ಪ್ರಜೆಗಳು ಆರೋಗ್ಯದಿಂದ ಇರಲೆಂದು ದುರ್ಗಾದೇವಿಗೆ ಸಾಮೂಹಿಕ ಪ್ರಾರ್ಥನೆ, ಚಂಡಿಕಾ ಯಾಗ ನಡೆಸಲಾಯಿತು. ದೇವರಿಗೆ ಮಹಾಮಂಗಳಾರತಿ ಬಳಿಕ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನವರಾತ್ರಿಯಲ್ಲಿ ಶಕ್ತಿದೇವತೆಯಾದ ಪಾರ್ವತಿಯನ್ನು ದುರ್ಗಾದೇವಿ, ಲಕ್ಷ್ಮೀ, ಸರಸ್ವತಿ, ಗೌರಿ ಸೇರಿದಂತೆ ಇನ್ನಿತರ ಹೆಸರುಗಳಿಂದ ವಿಶೇಷವಾಗಿ ಆರಾಧಿಸಲಾಗುತ್ತಿದೆ. ಒಂಭತ್ತು ದಿನಗಳಲ್ಲೂ ಸೇವಾಕರ್ತರ ಸಹಕಾರದಲ್ಲಿ ತಾಯಿಗೆ ವಿಶೇಷ ಅಭಿಷೇಕ, ಅಲಂಕಾರ, ಹೋಮ ಹವನಾದಿಗಳನ್ನು ಮಾಡುತ್ತಿದ್ದು ನಾಡಿನ ಸಮಸ್ತ ಜನತೆಗೆ ಸನ್ಮಂಗಳವನ್ನುಂಟು ಮಾಡುವಂತೆ ದೇವಿಯನ್ನು ಪ್ರಾರ್ಥಿಸಲಾಗುತ್ತಿದೆ. ಶುಕ್ರವಾರ ಮಹಾನವಮಿ ವಿಶೇಷವಾಗಿ ಸಿದ್ಧಿದಾತ್ರಿ ಪೂಜೆ, ಶನಿವಾರದಂದು ವಿಜಯದಶಮಿಯಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಿದ ಬಳಿ ವಿಸರ್ಜನೆ ಮಾಡಿ ನವರಾತ್ರಿ ಆಚರಣೆಯನ್ನು ಅಂತ್ಯಗೊಳಿಸುವುದಾಗಿ ಶ್ರೀ ವಿಜಯಕುಮಾರ್ ಗುರೂಜಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net