ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಚಂಡಿಕಾಯಾಗ

h1-ssk
Published on

ಹುಬ್ಬಳ್ಳಿ: ಎಸ್​ಎಸ್​ಕೆ ಶ್ರೀ ತುಳಜಾಭವಾನಿ ದೇವಸ್ಥಾನ, ಕೇಂದ್ರ ಪಂಚ ಸಮಿತಿ ವತಿಯಿಂದ ನಗರದ ದಾಜಿಬಾನಪೇಟೆಯ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ವೇ.ಬ್ರಹ್ಮಶ್ರೀ ರವೀಂದ್ರಾಚಾರ್ಯ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಇತ್ತೀಚೆಗೆ ಚಂಡಿಕಾಯಾಗ ಜರುಗಿತು.

ಶ್ರೀ ಮಹಾಗಣಪತಿ ಪೂಜೆಯೊಂದಿಗೆ ಧಾರ್ವಿುಕ ಕಾರ್ಯಗಳು ನಡೆದವು. ಸಭಾ ವಂದನೆ ಮತ್ತು ಮಹಾ ಸಂಕಲ್ಪದ ನಂತರ ಪುಣ್ಯಾಹವಾಚನಂ, ಮಾತೃಕಾ ಪೂಜನಂ, ದೇವಾನಂದಿ ಪಂಚಗವ್ಯದಿಂದ ಯಾಗ ಸ್ಥಾಳ ಹಾಗೂ ದೇವಾಲಯ ಶುದ್ಧೀಕರಣ ನಡೆಯಿತು. ನಂತರ ಕುಂಡ ಸಂಸ್ಕಾರ ಹಾಗೂ ಅಗ್ನಿ ಪ್ರತಿಷ್ಠಾಪನೆ ನೆರವೇರಿಸಿ, ನವಗ್ರಹ, ಅಷ್ಟದಿಕ್ಪಾಲಕ, ಕರ್ಮ ಸಾದ್ಗುಣ್ಯ ದೇವತೆಗಳ ಆವಾಹನೆ ನಡೆಯಿತು. ಯೋಗಿನಿದೇವತಾ, ನವಗ್ರಹ, ಅಷ್ಟದಿಕ್ಪಾಲಕ, ಕರ್ಮ ಸಾದ್ಗುಣ್ಯ ದೇವತಾ ಮತ್ತು ಯೋಗಿನಿದೇವತೆಯರ ಹೋಮ ಮಾಡಿದ ನಂತರ ಬಲಿಹಣ, ಪೂರ್ಜಾಹುತಿ ನಡೆದವು.

ದುರ್ಗಾ ಸಪ್ತಶತಿ ಪಾರಾಯಣ, ಶ್ರೀಲಲಿತಾ ಸಹಸ್ರನಾಮ ಪಠಣ, ಪ್ರಧಾನ ದೇವತಾ ಆವಾಹನ, ಮಂಡಲ ದೇವತಾ ಆವಾಹನೆ, ಕುಮಾರಿಯರಲ್ಲಿ ದೇವತೆಯರನ್ನು ಆವಾಹಿಸಿ ಪೂಜೆ ನೆರವೇರಿಸಲಾಯಿತು.

ಶ್ರೀ ಮಹಾಗಣಪತಿ ಪೂಜೆಯೊಂದಿಗೆ ಆವಾಹಿತ ಎಲ್ಲ ದೇವತೆಗಳ ಪೂಜೆ ನೆರವೇರಿಸಿ ಚಂಡಿ ಹೋಮ ಪ್ರಾರಂಭಿಸಿ, ಪೂರ್ಣಾಹುತಿ ಹೋಮದೊಂದಿಗೆ ಸಂಪನ್ನಗೊಂಡಿತು.

ಸುಹಾಸಿನಿ(ಮುತೆôದೆ)ಯರ ನವ ದುರ್ಗಾ ಪೂಜೆ, ಆಚಾರ್ಯ ದಂಪತಿಗಳ ಪೂಜೆ, ಬ್ರಾಹ್ಮಣ ಪೂಜೆ ಇತ್ಯಾದಿ ಧಾರ್ವಿುಕ ಕಾರ್ಯಕ್ರಮಗಳು ನೆರವೇರಿದವು. ನಂತರ ಅನ್ನಸಂತರ್ಪಣೆ ಜರುಗಿತು.

ಎಸ್​ಎಸ್​ಕೆ ಸಮಾಜದ ಚೀಫ್ ಟ್ರಸ್ಟಿ ಸತೀಶ ಮೆಹರವಾಡೆ, ಜಂಟಿ ಚೀಫ್ ಟ್ರಸ್ಟಿ ಭಾಸ್ಕರ ಜಿತೂರಿ, ಪ್ರಮುಖರಾದ ಟಿ.ವಿ. ಪೂಜಾರಿ, ನೀಲಕಂಠಸಾ ಜಡಿ, ಆನಂದ ಭಾಂಡಗೆ, ಪವನ ಮಿಸ್ಕಿನ, ಕೆ.ಪಿ. ಪೂಜಾರಿ, ಎನ್.ಎನ್. ಖೋಡೆ, ಶ್ರೀಕಾಂತ ಹಬೀಬ, ಅಶೋಕ ಕಾಟವೆ, ನಾಗೇಶ ಕಲಬುರ್ಗಿ, ಭಾಸ್ಕರ ಜಿತೂರಿ, ವಿಠ್ಠಲ ಲದವಾ, ರಂಗಾ ಬದ್ದಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net