ಹಳೇ ಮಾರಿಯಮ್ಮ ದೇವಳದಲ್ಲಿ ಚಂಡಿಕಾಯಾಗ

chandika
ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಚಂಡಿಕಾಯಾಗ ಪೂರ್ಣಾಹುತಿ ನಡೆಯಿತು.
Published on

ಪಡುಬಿದ್ರಿ: ಕಾಪು ಪೇಟೆ ಗೌಡ ಸಾರಸ್ವತ ಸಮಾಜದ ಆಡಳಿತದಲ್ಲಿರುವ ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ವರ್ಷಾವಧಿ ಚಂಡಿಕಾಯಾಗ ಪೂರ್ಣಾಹುತಿ ಮತ್ತು ಅನ್ನಸಂತರ್ಪಣೆ ಮಂಗಳವಾರ ನೆರವೇರಿತು.

ಅರ್ಚಕ ಕಮಲಾಕ್ಷ ಭಟ್ ನೇತೃತ್ವದಲ್ಲಿ ಚಂಡಿಕಾಯಾಗದ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಈ ಸಂದರ್ಭ ಹಾಲು ಪಾಯಸ ಸಹಿತ ವಿಶೇಷ ಅನ್ನಸಂತರ್ಪಣೆ ನಡೆಯಿತು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಆಡಳಿತ ಮೊಕ್ತೇಸರ ಕೆ. ಪ್ರಸಾದ್, ಗೋಕುಲ್‌ದಾಸ್ ಶೆಣೈ, ಮಾಜಿ ಆಡಳಿತ ಮೊಕ್ತೇಸರ ಶ್ರೀಧರ ಆನಂದರಾಯ ಶೆಣೈ, ಮೊಕ್ತೇಸರರಾದ ಸದಾಶಿವ ರಾಧಾಕೃಷ್ಣ ಕಾಮತ್, ರಾಜೇಶ್ ಮಾಧವರಾಯ ಶೆಣೈ, ಶಶಿಧರ ನಾಯಕ್, ಶ್ರೀಕಾಂತ ಲಕ್ಷ್ಮೀನಾರಾಯಣ ಭಟ್, ಸದಸ್ಯರಾದ ಚಂದ್ರಕಾಂತ್ ಕಾಮತ್, ಮೋಹನದಾಸ್ ಕಿಣಿ, ಕೃಷ್ಣಾನಂದ ನಾಯಕ್, ರಾಜೇಶ್ ಶೆಣೈ ಮಜೂರು, ಗಣ್ಯರು, ಊರವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net