ಕೂಡಲಿ ಮಠದಲ್ಲಿ ಚಂಡಿಕಾಹೋಮ

06 HHR P 08
ಹೊಳೆಹೊನ್ನೂರು ಸಮೀಪದ ಶ್ರೀಕ್ಷೇತ್ರ ಕೂಡಲಿ ಮಠದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಿಶೇಷ ಪೂಜೆ ಹಾಗೂ ಚಂಡಿಕಾ ಹೋಮ ನೆರವೇರಿತು. ಅರುಣಾಚಲ ಅಯ್ಯರ್, ಕುಸುಮಾ, ಚಂದ್ರಶೇಖರ್ ಇತರರಿದ್ದರು.
Published on

ಹೊಳೆಹೊನ್ನೂರು: ಲೋಕ ಕಲ್ಯಾಣಾರ್ಥ ಕೂಡಲಿ ಶೃಂಗೇರಿ ಶಾರದಾ ದಕ್ಷಿಣಾಮ್ನಾಯ ಶ್ರೀಮಠದ ಆವರಣದಲ್ಲಿ ಶ್ರೀ ದುರ್ಗಾಪರಮೇಶ್ವರಿ ಪೂಜಾ ಮಹೋತ್ಸವ ಹಾಗೂ ಶ್ರೀ ಚಂಡಿಕಾಹೋಮ ಮಂಗಳವಾರ ನೆರವೇರಿತು. ಬೆಳಗ್ಗೆ ಶ್ರೀದೇವಿಗೆ ಅಭಿಷೇಕ, ಚಂಡಿಕಾಹೋಮ, ಸಹಸ್ರಾರ್ಚನೆ, ಮಹಾನೈವೇದ್ಯ, ರಾಶಿಬಲಿ, ಬ್ರಾಹ್ಮಣ ಸುವಾಸಿನಿ ಪೂಜೆ ಬಳಿಕ ತೀರ್ಥಪ್ರಸಾದ ವಿನಿಯೋಗ ನಡೆಯಿತು. ನಂತರ ಭಕ್ತರಿಗೆ ವಿಶೇಷ ಅನ್ನಪ್ರಸಾದ ಸಂತರ್ಪಣೆ ಮಾಡಲಾಯಿತು. ಶ್ರೀಮಠದ ಪೀಠಾಽಪತಿಗಳಾದ ಶ್ರೀ ಅಭಿನವ ಶಂಕರಭಾರತೀ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅರ್ಚಕರಾದ ಅರುಣಾಚಲ ಅಯ್ಯರ್, ಡಿ.ಚಂದ್ರಶೇಖರ್, ಸೇವಾಕರ್ತರಾದ ಕುಸುಮಾ, ಚಂದ್ರಶೇಖರ್, ಶಾಂತಮ್ಮ, ಪ್ರಸನ್ನ, ಲಕ್ಷಿ÷್ಮÃದೇವಿ ಬಲರಾಮಪ್ಪ, ಮಂಜಪ್ಪ, ಈಶ್ವರಪ್ಪ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net