

ನೆಲಮಂಗಲ : ನಗರದ ಚನ್ನಪ್ಪ ಬಡಾವಣೆಯಲ್ಲಿನ ಆಚಾರ್ಯ ಕುಟೀರದಲ್ಲಿ ನವರಾತ್ರಿ ಹಾಗೂ ಲೋಕ ಕಲ್ಯಾಣಾರ್ಥ ಚಂಡಿಕಾಯಾಗ ವಿಜೃಂಭಣೆಯಿಂದ ನೆರವೇರಿತು. ಶ್ರೀವಿಜಯಕುಮಾರ ಗುರೂಜಿ ನೇತೃತ್ವದಲ್ಲಿ ನವರಾತ್ರಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮೊದಲಿಗೆ ವ್ನಿನಿವಾರಕ ಗಣಪತಿ ಹಾಗೂ ದುರ್ಗಾದೇವಿಗೆ ಪಂಚಾಮೃತಾಭಿಷೇಕ, ಅರಿಶಿಣ, ಕುಂಕುಮ ಗಂಧಾಭಿಷೇಕ ಮಾಡಿದರೆ, ನವರಾತ್ರಿ ಪಯುಕ್ತ ಪ್ರತಿಷ್ಠಾಪಿಸಿರುವ ಗೌರಿ, ಲ್ಮ, ಸರಸ್ವತಿ, ಪರಿವಾರ ದೇವತೆಗಳಾದ ಶ್ರೀದೇವಿ ಭೂದೇವಿ ಸಮೇತ ವೆಂಕಟೇಶ್ವರ, ಕಾಲಭೈರವೇಶ್ವರ, ಪಾರ್ವತಿ ಪರಮೇಶ್ವರ, ಭದ್ರಕಾಳಿ, ಆಂಜನೇಯ ದೇವರುಗಳಿಗೂ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಚಂಡಿಕಾ ಯಾಗ: ನವರಾತ್ರಿ ಹಾಗೂ ಲೋಕ ಕಲ್ಯಾಣಾರ್ಥ ಆಯೋಜಿಸಿದ್ದ ಚಂಡಿಕಾಯಾಗವನ್ನು 7 ಅಧ್ಯಾಯಗಳ ದುರ್ಗಾ ಸಪ್ತಶತಿ ಪಾರಾಯಣದ ಮೂಲಕ ಶ್ರೀಸತ್ಯ ಪ್ರಮೋಧಾಚಾರ್ ನೆರವೇರಿಸಿದರು. ಮರ್ಗಾಷ್ಟಮಿ ಪೂಜೆಯಲ್ಲಿ ಬೆಂಗಳೂರು ನಗರ ಸೇರಿ ನೆಲಮಂಗಲದ ನೂರಾರು ಜನ ಪಾಲ್ಗೊಂಡಿದ್ದು, ದೇವಿಯ ದರ್ಶನ ಪಡೆದರು. ನವರಾತ್ರಿ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸೊಂಡೇಕೊಪ್ಪ ರಮೇಶ್, ಸದಸ್ಯ ವೃಕ್ಷಮಹೇಶ್, ಪ್ರಮೋದ್ ಕುಮಾರ್, ರವಿಕುಮಾರ್, ಕೆ.ಸಿ.ಕುಮಾರ್, ಮಂಜುಳಾ ಗಣೇಶ್, ಪ್ರೇಮಾಹರೀಶ್, ಪ್ರೇಮಾ ರವಿಕುಮಾರ್, ಮಂಜುಳಾಮಹೇಶ್, ನವೀನ್, ದರ್ಶನ್, ಹೇಮಂತ್ ಉಪಸ್ಥಿತರಿದ್ದರು.
ಸಾಮೂಹಿಕ ಪ್ರಾರ್ಥನೆ : ರಾಜ್ಯಕ್ಕೆ ಬಂದೊದಗಿರುವ ಕೆಲ ಸಮಸ್ಯೆಗಳನ್ನು ದೂರ ಮಾಡಿ ಆರೋಗ್ಯ ಕರುಣಿಸುವಂತೆ, ಸಕಾಲಕ್ಕೆ ಮಳೆಯಾಗಿ ಸಮೃದ್ಧ ಬೆಳೆಯಾಗಿ ಅನ್ನದಾತ ರೈತರು, ಸಮಸ್ತ ಪ್ರಜೆಗಳು ಆರೋಗ್ಯದಿಂದ ಇರಲೆಂದು ದುರ್ಗಾ ದೇವಿಗೆ ಸಾಮೂಹಿಕ ಪೂಜೆ ಸಲ್ಲಿಸಲಾಯಿತು. ಪ್ರಾರ್ಥನೆ. ಚಂಡಿಕಾಯಾಗ ದೇವರಿಗೆ ಮಹಾಮಂಗಳಾರತಿ ಬಳಿಕ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನವರಾತ್ರಿ ಶಕ್ತಿದೇವತೆಯಲ್ಲಿ ಪಾರ್ವತಿಯನ್ನು ದುರ್ಗಾದೇವಿ, ಲ್ಮ, ಸರಸ್ವತಿ, ಗೌರಿ ಸೇರಿ ಇನ್ನಿತರ ಒಂಭತ್ತು ದಿನಗಳಲ್ಲೂ ಸೇವಾಕರ್ತರ ಸಹಕಾರದಲ್ಲಿ ತಾಯಿಗೆ ವಿಶೇಷ ಅಭಿಷೇಕ, ಅಲಂಕಾರ, ಹೋಮ ಹವನಾದಿಗಳನ್ನು ಮಾಡಲಾಯಿತು. ಶಾಸಕ ಎನ್.ಶ್ರೀನಿವಾಸ್, ನೆ.ಯೋ. ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ನಿಟಕಪೂರ್ವ ಅಧ್ಯಕ್ಷ ಎಂ.ನಾರಾಯಣ್ಗೌಡ, ಮುಖಂಡ ಕೆ.ಕೃಷ್ಣಪ್ಪ, ವಸಂತ್, ಮುನ್ನರಾಮು ಪೂಜೆ ಸಲ್ಲಿಸಿದರು.
ಬುಧವಾರ ಮಹಾನವಮಿ ವಿಶೇಷವಾಗಿ ಸಿದ್ದಿದಾತ್ರಿ ಪೂಜೆ, ಗುರುವಾರದಂದು ವಿಜಯದಶಮಿಯಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಿದ ಬಳಿ ವಿಸರ್ಜನೆ ಮಾಡಿ ನವರಾತ್ರಿ ಆಚರಣೆಯನ್ನು ಅಂತ್ಯಗೊಳಿಸಲಾಗುವುದು. ಶ್ರೀವಿಜಯಕುಮಾರ್ ಗುರೂಜಿ