

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ರಾಜಾಪುರ ಪ್ರದೇಶದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ೨೦೨೫ನೇ ಡಿಸೆಂಬರ್ ೧ರಿಂದ ೧೧ರವರೆಗೆ ಆಯೋಜಿಸಿರುವ ಮಾತಾ ಶಾರದಾದೇವಿ ಜಯಂತಿ ಮತ್ತು ಶ್ರೀ ಆಯುತ ಚಂಡಿಕಾಯಾಗ ಹಿನ್ನೆಲೆಯಲ್ಲಿ ಪಾರಾಯಣ ಸಂಕಲ್ಪ ಮಾಡಲಾಗಿದೆ ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ಮಹೇಶ್ವರಾನಂದಜೀ ತಿಳಿಸಿದ್ದಾರೆ.
ಚಂಡಿಕಾಯಾಗದಲ್ಲಿ ೧೦ ಸಾವಿರ ದುರ್ಗಾಸಪ್ತಶತಿ ಪಾರಾಯಣ ಜಪ ಮಾಡಲಾಗುತ್ತಿದೆ. ಈಗಾಗಲೇ ಪಾರಾಯಣ ಪ್ರಕ್ರಿಯೆ ಪ್ರಾರಂಭವಾಗಿದ್ದು, ೨೦೨೫ನೇ ನವೆಂಬರ್ ೨೮ರವರೆಗೆ ನಿರಂತರ ನಡೆಯಲಿದೆ. ಆಸಕ್ತ ಒಂದು ಸಾವಿರ ಜನರಿಗೆ ಕಲಿಸುವ ಸಂಕಲ್ಪ ಮಾಡಲಾಗಿದೆ. ಪುರುಷ, ಸ್ತಿçÃಯರು ಭಾಗವಹಿಸಬಹುದು. ಜನವರಿ ೫ರಂದು ತರಗತಿ ಪ್ರಾರಂಭವಾಗಲಿದ್ದು, ಬೆಳಗ್ಗೆ ೧೧, ಮಧ್ಯಾಹ್ನ ೧ ಮತ್ತು ಸಂಜೆ ೭ರಿಂದ ನಡೆಯಲಿದೆ ಎಂದು ತಿಳಿಸಿದ್ದಾರೆ.
ಶ್ರೀ ಆಯುತ ಚಂಡಿಯಾಗದಲ್ಲಿ ಭಾಗಿಯಾಗಿ ಪಾರಾಯಣ ಮಾಡುವ ಆಸಕ್ತು ನಿತ್ಯ ಬೆಳಗ್ಗೆ ೬ರಿಂದ ೮ರವರೆಗೆ ಒದಗಿಸುವ ಲಿಂಕ್ ಮೂಲಕ ಭಾಗವಹಿಸಬಹುದು.
ಭಾಗವಹಿಸಲು, ಹೆಚ್ಚಿನ ಮಾಹಿತಿಗೆ ಶಾರದಾ ಪಾಟೀಲ್ ಮೊ.೯೪೪೯೩೮೨೧೧೧, ಲತಾ ಜೋಶಿ ೯೭೩೯೭೮೩೦೧೮, ರಾಜೇಶ್ವರಿ ೯೪೪೮೬೧೦೩೧೧, ಕಾವೇರಿ ೯೦೩೬೨೬೪೭೫೪, ಸುಜಾತಾ ೯೪೪೯೦೩೬೭೮೮, ಶಶಿಕಲಾ ಜಡೆ ೯೭೪೧೭೧೪೨೧೧, ಜ್ಯೋತಿ ಪಾಟೀಲ್ ೮೦೫೦೨೦೬೫೦೨, ಕಸ್ತೂರಿ ೬೩೬೧೬೯೦೫೫೪, ಸುಮಂಗಲಾ ಚಕ್ರವರ್ತಿ ೯೪೪೮೪೪೪೪೨೨, ವಿಜಯಲಕ್ಷಿö್ಮÃ ತಂಬಾಕೆ ೯೫೯೧೪೧೧೮೭೩, ಜಯಶ್ರೀ ಪಾಟೀಲ್ ೯೬೦೬೩೮೫೬೮೯ಗೆ ಸಂಪರ್ಕಿಸಬಹುದಾಗಿದೆ.