ಕಚ್ಚೂರು ಶ್ರೀಮಾಲ್ತೀ ದೇವಿ ದೇವಳದಲ್ಲಿ ಚಂಡಿಕಾಯಾಗ

BMR
Published on

ಬ್ರಹ್ಮಾವರ: ಬಾರಕೂರು ಕಚ್ಚೂರು ಶ್ರೀಮಾಲ್ತೀ ದೇವಿ ದೇವಸ್ಥಾನ ಮತ್ತು ಬಬ್ಬುಸ್ವಾಮಿ ಮೂಲಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ರಮೇಶ್ ಭಟ್‌ನಾಯರ್‌ಬೆಟ್ಟು ಆಚಾರ್ಯತ್ವದಲ್ಲಿ ಸಾಮೂಹಿಕ ಚಂಡಿಕಾಯಾಗ ಗುರುವಾರ ನಡೆಯಿತು. ದೇವಸ್ಥಾನದ ಆಡಳಿತ ಧರ್ಮದರ್ಶಿ ಗೋಕುಲ್‌ದಾಸ್ ಬಾರಕೂರು ಮತ್ತು ಸುಮಾಲಿನಿ ಗೋಕುಲ್ ದಾಸ್ ಸಂಕಲ್ಪ ಪೂಜೆಯಲ್ಲಿ ಭಾಗಿಯಾದರು.

ಅಕ್ಷರಾಭ್ಯಾಸ ಮತ್ತು ತುಲಾಭಾರ, ಭಜನೆ, ಭಕ್ತಿ ಸಂಗೀತ ಜರುಗಿತು. ಸಹಸ್ರಾರು ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು. ಶಾಸಕ ಯಶ್‌ಪಾಲ್ ಸುವರ್ಣ ದೇವಸ್ಥಾನಕ್ಕೆ ಭೇಟಿ ನೀಡಿದರು. ವಕೀಲ ಸುಪ್ರಸಾದ್ ಶೆಟ್ಟಿ ಬೈಕಾಡಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು.

ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಶಿವಪ್ಪ ನಂತೂರು, ಪದಾಧಿಕಾರಿಗಳಾದ ಪ್ರೇಮಾನಂದ ಬಾರಕೂರು, ಜನಾರ್ದನ ಬಿಜೈ, ರಘುರಾಮ ಪುತ್ತೂರು, ನರಸಿಂಹ ಹೇರಾಡಿ, ಕಮಲಾಕ್ಷ ಬಾರಕೂರು, ರವಿರಾಜ ಹೆಜಮಾಡಿ, ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net