ಚಂಡಿಕಾ ಹೋಮ 30ರಂದು

Tadas
Published on

ತಡಸ: ನವರಾತ್ರಿ ಪ್ರಯುಕ್ತ ಗ್ರಾಮದೇವಿ ದೇವಸ್ಥಾನದಲ್ಲಿ ಸೋಮವಾರದಿಂದ ನಿತ್ಯ ಸಂಜೆ 7ರಿಂದ 10ಗಂಟೆವರೆಗೆ ಪುರಾಣ ಪ್ರವಚನ ನಡೆಯಲಿದೆ.

30ರಂದು ಬೆಳಗ್ಗೆ 8ಗಂಟೆಗೆ ದೇವಸ್ಥಾನದ ಆವರಣದಲ್ಲಿ ಪ್ರಶಾಂತ ಭಟ್ಟ ತಾಪಸಕರ ನೇತೃತ್ವದಲ್ಲಿ ಚಂಡಿಕಾ ಹೋಮ, ಮಧ್ಯಾಹ್ನ 1ಗಂಟೆಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ 1-30ರಿಂದ ಅನ್ನಪ್ರಸಾದ ಸೇವೆ ಜರುಗಲಿದೆ. ಅ.1ರಂದು ಖಂಡೆ ಪೂಜೆ, 2ರಂದು ಪುರಾಣ ಮಹಾಮಂಗಲ, ವಿಜಯದಶಮಿ ಆಚರಣೆ, ಪಲ್ಲಕ್ಕಿ ಮೆರವಣಿಗೆ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗುವುದು ಎಂದು ತಾಯಮ್ಮ ಸೇವಾ ಸಮಿತಿ ಕಮಿಟಿ ಅಧ್ಯಕ್ಷ ಕೃಷ್ಣ ಚವಡಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net