ಬ್ಯಾಕೋಡು: ಐತಿಹಾಸಿಕ ಚಂದ್ರಯಾನ-3ರ ಅಂತಿಮ ಹಂತದ ಯಶಸ್ಸಿಗಾಗಿ ಸಾಗರ ತಾಲೂಕಿನ ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ದುರ್ಗಾ ಸಪ್ತಶತಿ ಪಾರಾಯಣ, ಚಂಡಿಕಾ ಹೋಮ ನೆರವೇರಿಸಲಾಯಿತು. ದೇವಾಲಯದ ಧರ್ಮದರ್ಶಿ ಡಾ. ಎಸ್.ರಾಮಪ್ಪ, ರವಿಕುಮಾರ್ ಸಿಗಂದೂರು ಇತರರಿದ್ದರು.