

ಹೊಳೆಆಲೂರ: ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಚಂದವ್ವ ಲಕ್ಷ್ಮಣ ಪೂಜಾರ ಮತ್ತು ಉಪಾಧ್ಯಕ್ಷೆಯಾಗಿ ಶ್ರೀಜ್ಯೋತಿ ಕಲ್ಲಪ್ಪ ಗಾಣಿಗೇರ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ವಲಯ ಅರಣ್ಯ ಅಧಿಕಾರಿ ರಾಮಣ್ಣ ಪೂಜಾರ, ಸಹಾಯಕರಾಗಿ ಪಿಡಿಒ ಬಸವರಾಜ ಗಿರಿತಮ್ಮನವರ ಕಾರ್ಯ ನಿರ್ವಹಿಸಿದರು.
21 ಸದಸ್ಯರನ್ನು ಹೊಂದಿರುವ ಗ್ರಾಪಂನಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ 2ಎಗೆ ಮೀಸಲಾಗಿತ್ತು. ಶಾಸಕ ಸಿ.ಸಿ. ಪಾಟೀಲ ಬಣದ ಸಂಘಟಿತ ಪ್ರಯತ್ನದ ಫಲವಾಗಿ ತಲಾ 11 ಮತ ಪಡೆದು ಚಂದವ್ವ ಪೂಜಾರ ಹಾಗೂ ಶ್ರೀಜ್ಯೋತಿ ಗಾಣಿಗೇರ ಆಯ್ಕೆಯಾದರು. ಬಿಜೆಪಿ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಮಾತನಾಡಿ, ಗ್ರಾಮದ ಸ್ವಚ್ಛತೆ, ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಕುಡಿಯುವ ನೀರಿನ ಸಮಸ್ಯೆ ನಿವಾರಿಸಿ ಗ್ರಾಮದ ಅಭಿವೃದ್ಧಿಗೆ ಪಕ್ಷಾತೀತವಾಗಿ ಹಾಗೂ ಪ್ರಾಮಾಣಿಕಾಗಿ ಶ್ರಮಿಸಲಾಗುವುದು ಎಂದರು.
ಗಿರೀಶಗೌಡ ಚನ್ನಪ್ಪಗೌಡ್ರ, ಗಂಗಾಧರಗೌಡ್ರ ಪಾಟೀಲ, ಕೆ.ಸಿ. ಪಾಟೀಲ, ಎಸ್.ಜಿ. ತೋಟದ, ಬಸವರಾಜ ಬೀರನೂರು, ಜಿ.ಕೆ. ಕಲ್ಲಾಪೂರ, ಕಲ್ಲಪ್ಪ ಸೊಬರದ, ಮುತ್ತಣ್ಣ ಮುದಕವಿ, ಎನ್.ಜಿ. ಪಾಟೀಲ, ಮಲ್ಲಿಕಾರ್ಜುನ ಕಂಠಿ, ಸುಧಾ ಎಲಿಗಾರ, ಸುಮಂಗಲಾ ಕಲ್ಲಾಪೂರ, ರೇಣುಕಾ ತೆಗ್ಗಿ ಇತರರು ಉಪಸ್ಥಿತರಿದ್ದರು.