ಚಂದಾಪುರ ಗ್ರಾಪಂಗೆ ಸಾವಿತ್ರಿ ಅಧ್ಯಕ್ಷೆ

31-SGN-2 CHANDAPUR
Published on

ಶಿಗ್ಗಾಂವಿ: ತಾಲೂಕಿನ ಚಂದಾಪುರ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಸಾವಿತ್ರಿ ಒಂಟೆತ್ತಿವರ ಅಧ್ಯಕ್ಷೆಯಾಗಿ, ಸುನಂದವ್ವ ಕಮ್ಮಾರ ಉಪಾಧ್ಯಕ್ಷರಾಗಿ ಆಯ್ಕೆಯಾದರು.

13 ಸದಸ್ಯ ಬಲ ಹೊಂದಿರುವ ಗ್ರಾಪಂನ ಎರಡನೇ ಅವಧಿಯ ಆಡಳಿತಕ್ಕೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ‘ಅ’ ವರ್ಗ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸಾವಿತ್ರಿ ಒಂಟೆತ್ತಿವರ ಮತ್ತು ವಿರೂಪಾಕ್ಷಯ್ಯ ಹಿರೇಮಠ ನಾಮಪತ್ರ ಸಲ್ಲಿಸಿದ್ದು, 7 ಮತಗಳನ್ನು ಪಡೆಯುವ ಮೂಲಕ ಸಾವಿತ್ರಿ ಒಂಟೆತ್ತಿವರ್ ಅಧ್ಯಕ್ಷೆಯಾಗಿ ಆಯ್ಕೆಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸುನಂದವ್ವ ಕಮ್ಮಾರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಸುರೇಶಬಾಬು ದೀಕ್ಷಿತ್ ಘೊಷಣೆ ಮಾಡಿದರು.

ನಂತರ ನಡೆದ ಅಭಿನಂದನಾ ಸಭೆಯಲ್ಲಿ ಪರಶುರಾಮ ಜಟ್ಟೆಪ್ಪನವರ, ಭರಮಣ್ಣ ದೊಡ್ಡಮನಿ, ಮುತ್ತಪ್ಪ ಗುಡಗೇರಿ, ಮಹೇಶ ಕರ್ಜಗಿ, ಮಾರುತಿ ಕಲಾಲ, ಮಾರ್ತಂಡಪ್ಪ ಲಕ್ಕಿಕೊಪ್ಪ, ಗುಡ್ಡಪ್ಪ ಗುಡ್ಡಣ್ಣವರ, ಮಂಜುನಾಥ ಹೂಗಾಡಿ, ಕರಬಸಪ್ಪ ಜಟ್ಟೆಪ್ಪನವರ, ರಾಜು ಲಮಾಣಿ, ಪ್ರಕಾಶ ಜಟ್ಟೆಪ್ಪನವರ, ಹರೀಶ ದೊಡ್ಡಮನಿ, ರಮೇಶ ತಳವಾರ, ಮಲ್ಲೇಶ ತಳವಾರ, ಲಕ್ಷ್ಮಣ ಲಮಾಣಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net