ಚಂದನ್‌ಗೆ ಯುಎನ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ

14.NPK-D
ಪ್ರಶಸ್ತಿ ಪಡೆದುಕೊಂಡಿರುವ ಕಾವೇರಿ ಮನೆ ಚಂದನ್ .
Published on

ನಾಪೋಕ್ಲು: ಡೆಲ್ಲಿಯ ಯುಎನ್ ಸಂಸ್ಥೆ ವಿಶೇಷ ಪ್ರತಿಭೆಯನ್ನು ಗುರುತಿಸಿ ನೀಡುವ ಯುಎನ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಯನ್ನು ಕೊಡಗಿನ ಕಾವೇರಿ ಮನೆ ಚಂದನ್ ಪಡೆದುಕೊಂಡಿದ್ದಾರೆ.

ಕಾರು, ಜೀಪು, ಜೆಸಿಬಿ, ಹಿಟಾಚಿ ಸೇರಿದಂತೆ ವಿವಿಧ ವಾಹನಗಳನ್ನು ಲೀಲಾಜಾಲವಾಗಿ ಚಲಾಯಿಸುವ 11 ವರ್ಷದ ಕಾವೇರಿ ಮನೆ ಚಂದನ್ ಪ್ರತಿಭೆಯನ್ನು ಯುಎನ್ ಸಂಸ್ಥೆ ಗುರುತಿಸಿ ಯುಎನ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ, ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತಿನ ಕರ್ನಾಟಕ ಮಾಣಿಕ್ಯ ಶ್ರೇಷ್ಠ ರಾಜ್ಯ ಪ್ರಶಸ್ತಿ ನೀಡಿದೆ.

ಚಂದನ್ ಕೊಡಗಿನ ಮಡಿಕೇರಿ ತಾಲೂಕು ಅಯ್ಯಂಗೇರಿ ಗ್ರಾಮದ ನಿವಾಸಿ ಗುತ್ತಿಗೆದಾರ ಕಾವೇರಿ ಮನೆ ಭರತ್ ಮತ್ತು ಯೋಗಿತಾ ದಂಪತಿ ಪುತ್ರ. ನಾಪೋಕ್ಲು ಶ್ರೀರಾಮ ಟ್ರಸ್ಟ್ ವಿದ್ಯಾ ಸಂಸ್ಥೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಈತನನ್ನು ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ ವತಿಯಿಂದ ಮೈಸೂರಿನ ಪುರಭವನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ 1 ಲಕ್ಷ ನಗದು ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಸಿ.ಚೊಂದಮ್ಮ ಪುಣಚ್ಚ, ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಕಸ್ತೂರಿ ಚಂದ್ರು, ಮೈಸೂರು ನಗರ ಅಧ್ಯಕ್ಷರಾದ ಮೌಲ್ಯ ಜೈ ಕುಮಾರ್, ಹಾಸನ ಜಿಲ್ಲಾಧ್ಯಕ್ಷೆ ಪಾರ್ವತಿ, ಹುಬ್ಬಳ್ಳಿ ಧಾರವಾಡ ಜಿಲ್ಲಾಧ್ಯಕ್ಷೆ ಡಾ.ಜಿ.ಪ್ರೇಮಾ, ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷೆ ಡಾ.ನಯನಾ, ಸಂಸ್ಥಾಪಕ ಕಾರ್ಯದರ್ಶಿ ಡಾ.ತೇಜಸ್ ಪೃಥ್ವಿರಾಜ್, ಮೈಸೂರು ಜಿಲ್ಲಾಧ್ಯಕ್ಷರಾದ ಅಮೀನಾ ಬೇಗಮ್, ನಟರಾಜು ಎಚ್.ಪಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net