

ಹುನಗುಂದ: ನುಲಿಯ ಚಂದಯ್ಯನವರು 12ನೇ ಶತಮಾನದ ದಾರ್ಶನಿಕ, ಬಸವಾದಿ ಶರಣರ ಸಮೂಹದ ವಚನಕಾರರಾಗಿದ್ದರು. ತಮ್ಮ ವಚನಗಳಿಂದ ಸಮಾಜ ಸುಧಾರಣೆಗೆ ಅತ್ಯುನ್ನತ ಕೊಡುಗೆ ನೀಡಿದ್ದಾರೆ ಎಂದು ತಹಸೀಲ್ದಾರ್ ನಿಂಗಪ್ಪ ಬಿರಾದಾರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಸಭಾಭವನದಲ್ಲಿ ಸೋಮವಾರ ತಾಲೂಕು ಆಡಳಿತದಿಂದ 917ನೇ ಕಾಯಕ ಯೋಗಿ ನುಲಿಯ ಚಂದಯ್ಯ ಅವರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.
ಬಸವಣ್ಣನವರ ಸಮಕಾಲಿನ ಶಿವಶರಣ, ಶ್ರೇಷ್ಠ ಕಾಯಕ ಜೀವಿ ಶಿವಶರಣ ನುಲಿಯ ಚಂದಯ್ಯನವರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಚ್. ಕಟ್ಟಿಮನಿ, ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಡಿ, ಹಿಂದುಳಿದ ಇಲಾಖೆ ಅಧಿಕಾರಿ ಸಂಗಮೇಶ ಗಡೇದ, ಸಿಡಿಪಿಒ ವಿ.ಎ. ಗಿರಿತಿಮ್ಮಣ್ಣನವರ, ಬಸ್ ಘಟಕದ ವ್ಯವಸ್ಥಾಪಕ ಅರವಿಂದ ಭಜಂತ್ರಿ, ಶಿರಸ್ತೇದಾರ ಎಚ್.ಎಂ. ಶಿವಣಗಿ, ಶ್ರವಣ ಮುಂಡೇವಾಡಿ, ಸಮಾಜ ಮುಖಂಡರಾದ ರಾಮಣ್ಣ ಭಜಂತ್ರಿ, ಮಹಾಂತೇಶ ಭಜಂತ್ರಿ, ಶಿವಪುತ್ರಪ್ಪ ಭಜಂತ್ರಿ, ಶೇಖಪ್ಪ ಭಜಂತ್ರಿ, ಬಸವರಾಜ ಬೆಳಗಲ್ಲ, ಸಂಗಪ್ಪ ಭಜಂತ್ರಿ, ದುರ್ಗಪ್ಪ ಬೆಳಗಲ್ಲ ಇತರರಿದ್ದರು.