ವಚನಗಳ ಮೂಲಕ ಬೆಳಕು ನೀಡಿದ ನುಲಿಯ ಚಂದಯ್ಯ

19skpp2 nuliya
Published on


ಸಕಲೇಶಪುರ : ನುಲಿಯ ಚಂದಯ್ಯ ಅವರು ವಚನಗಳ ಮೂಲಕ ಸಮಾಜಕ್ಕೆ ಬೆಳಕು ನೀಡಿದರು ಎಂದು ತಹಸೀಲ್ದಾರ್ ಮೇಘನಾ ಹೇಳಿದರು.


ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಅಖಿಲ ಕರ್ನಾಟಕ ಕುಳುವ (ಕೊರವ- ಕೊರಚ ) ಮಹಾಸಭಾದಿಂದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾಯಕ ಯೋಗಿ ಶರಣ ನುಲಿಯ ಚಂದಯ್ಯ ಅವರ 917 ನೇ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಶರಣ ಚಂದಯ್ಯ ಅವರು ಸುಮಾರು 1030 ರಲ್ಲಿ ಬಿಜಾಪುರ ಜಿಲ್ಲೆಯ ಶಿವಣಿಗಿ ಗ್ರಾಮದಲ್ಲಿ ಜನಿಸಿದರು. ಕಲ್ಯಾಣದ ಕೆರೆಗಳಲ್ಲಿ ಸಿಗುವ ಹೊಡಕೆ ಚೇಣಿ ಹಾಗೂ ನಾರುಗಳಿಂದ ಹಗ್ಗ ಹೊಸೆದು ಮಾರಾಟ ಮಾಡಿ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದರು. ಹಗ್ಗ ಮಾಡುವ ಕಾಯಕವನ್ನು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಾ ಬಸವಣ್ಣ ಅವರಿಗೆ ಪ್ರಿಯರಾದರು. ಇವರು ಚಂದೇಶ್ವರ ಲಿಂಗ ಎಂಬ ಅಂಕಿತ ನಾಮದಲ್ಲಿ ಸುಮಾರು 48 ವಚನ ರಚನೆ ಮಾಡಿದ್ದು, ಇವರ ಕುರಿತು ಇಂದಿನ ಜನಾಂಗ ಹೆಚ್ಚಿನ ಅರಿವು ಹೊಂದಲು ಮುಂದಾಗಬೇಕೆಂದು ಹೇಳಿದರು.


ತಾಲೂಕು ಕುಳುವ ಸಮಾಜದ ಅಧ್ಯಕ್ಷ ಮೋಹನ್ ಕುಮಾರ್ ಶಿರಸ್ತೇದಾರ್ ಉಮೇಶ್, ಪುರಸಭಾ ಮುಖ್ಯಾಧಿಕಾರಿ ನಟರಾಜ್, ಕುಳುವ ಸಮಾಜದ ಮುಖಂಡರುಗಳಾದ ಕಾಂತರಾಜ್, ಸೋಮಣ್ಣ, ವಿಶ್ವನಾಥ್, ರೂಪಾ, ಶಶಿ, ಪುರುಷೋತ್ತಮ್, ಕೃಷ್ಣ, ಲೋಕೇಶ್ ಸೇರಿದಂತೆ ಸಮಾಜದ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net