

ಚಿತ್ರದುರ್ಗ: ಜಿಲ್ಲಾಡಳಿತದಿಂದ ಆ.31ರಂದು ನಗರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಹಾಗೂ ಕಾಯಕ ಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಪ್ರತ್ಯೇಕವಾಗಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 11ಕ್ಕೆ ನಗರದ ಆರ್ಯ ಈಡಿಗರ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿರುವ ಕಾರ‌್ಯಕ್ರಮದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾಧ್ಯಕ್ಷ ಎಚ್.ಜೀವನ್, ಕಾರ‌್ಯದರ್ಶಿ ಟಿ.ಮಂಜುನಾಥ, ಮಹಿಳಾ ಸಂಘದ ಅಧ್ಯಕ್ಷೆ ಅನುರಾಧಾ ರವಿಕುಮಾರ್ ಇತರರು ಭಾಗವಹಿಸುವರು. ಇ.ಗಂಗಾಧರ್ ಉಪನ್ಯಾಸ ನೀಡುವರು. ಆಯಿತೋಳ ವಿರೂಪಾಕ್ಷಪ್ಪ ತಂಡದವರು ಗೀತಗಾಯನ ನಡೆಸಿಕೊಡುವರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಮಧ್ಯಾಹ್ನ 1 ಗಂಟೆಗೆ ಶ್ರೀ ನುಲಿಯ ಚಂದಯ್ಯ ಜಯಂತಿ ಆಚರಿಸಲಾಗುತ್ತಿದೆ. ಮುರುಘಾಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಅಖಿಲ ಕರ್ನಾಟಕ ಕೊರಚ ಮಹಾ ಸಂಘದ ಅಧ್ಯಕ್ಷ ಎಚ್.ಎನ್.ರಾಮಚಂದ್ರಪ್ಪ, ಕೊರಚ ಸಮಾಜದ ಜಿಲ್ಲಾಧ್ಯಕ್ಷ ವೈ.ಕುಮಾರ್, ಪ್ರಧಾನ ಕಾರ‌್ಯದರ್ಶಿ ಎನ್.ಧನಂಜಯ, ಕೊರಮ ಸಮಾಜದ ಜಿಲ್ಲಾಧ್ಯಕ್ಷ ಕೆ.ಕೃಷ್ಣಪ್ಪ, ಪ್ರಧಾನ ಕಾರ‌್ಯದರ್ಶಿ ದ್ವಾರಕನಾಥ್ ಇತರರು ಭಾಗವಹಿಸುವರು. ಡಾ.ಆರ್.ನಾಗಪ್ಪ ಉಪನ್ಯಾಸ ನೀಡುವರು. ಹಿರೇಕೆರೆಹಳ್ಳಿ ಲೋಕೇಶ್ ಪಲ್ಲವಿ ತಂಡದವರು ಗೀತಗಾಯನ ನಡೆಸಿಕೊಡುವರು.