

ಭದ್ರಾವತಿ: ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಕ್ರಾಂತಿಗೆ 12ನೇ ಶತಮಾನದಲ್ಲೇ ಬಸವಣ್ಣ, ಅಕ್ಕಮಹಾದೇವಿಯಂತೆ ಹಲವು ಶಿವಶರಣೆಯರು ಕೈ ಜೋಡಿಸಿದ್ದು ಅವರಲ್ಲಿ ನುಲಿಯ ಚಂದಯ್ಯ ಕೂಡ ಒಬ್ಬರು ಎಂದು ತಹಸೀಲ್ದಾರ್ ನಾಗರಾಜ್ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶ್ರೀ ನುಲಿಯ ಚಂದಯ್ಯನವರ 916ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನುಲಿಯ ಚಂದಯ್ಯ ತಮ್ಮ ಕೆಲಸಗಳ ಮೂಲಕವೇ ಆತ್ಮೋನ್ನತಿ ಕಂಡವರು. ಪ್ರಾಮಾಣಿಕತೆಗೆ ಹೆಸರಾಗಿದ್ದ ಅವರು ಅಸಮಾನತೆಯ ವಿರುದ್ಧ ನಡೆಸಿದ ಹೋರಟ ಎಂದಿಗೂ ಮರೆಯುವಂತಿಲ್ಲ ಎಂದರು. ತಾಪಂ ಇಒ ಗಂಗಣ್ಣ. ಮಾಜಿ ನಗರಸಭಾ ಸದಸ್ಯ ಶಿವರಾಜ್, ರಾಜ್ಯ ದಲಿತ ನೌಕರರ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಜಯಪ್ಪ ಹೆಬ್ಬಳಗೆರೆ, ಎಂ.ಈಶ್ವರಪ್ಪ, ನಾಗೇಶ್ ಇತರರಿದ್ದರು.