ಎರಡು ವಿಶ್ವವಿದ್ಯಾಲಯಗಳಿಗೆ ಕುಲಪತಿ ನೇಮಕ

Gudasi
Published on

ಬೆಂಗಳೂರು: ವರ್ಷಗಳಿಂದ ಖಾಲಿ ಇದ್ದ ವಿಶ್ವವಿದ್ಯಾಲಗಳ ಪೈಕಿ ಎರಡು ವಿವಿಗಳಿಗೆ ಕುಲಪತಿ ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನಲ್ಲಿರುವ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಪ್ರೊ.ಕೆ.ಇ.ದೇವನಾಥನ್ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಡಾ.ಕೆ.ಬಿ.ಗುಡಸಿ ಅವರನ್ನು ನೇಮಕ ಮಾಡಿದೆ. ಕುಲಪತಿಯ ಅಧಿಕಾರವಧಿ 4 ವರ್ಷ ಹಾಗೂ 67 ವರ್ಷ ಯಾವುದು ಮೊದಲೋ ಅಲ್ಲಿಯವರೆಗೆ ಮುಂದುವರೆಯಬಹುದಾಗಿದೆ.

ದೇವನಾಥನ್ ಅವರು ತಿರುಪತಿಯಲ್ಲಿರುವ ರಾಷ್ಟ್ರೀಯ ಸಂಸ್ಕೃತಿ ವಿದ್ಯಾಪೀಠದ ವಿಶಿಷ್ಠ ಅದ್ವೈತ ವೇದಾಂತ ವಿಭಾಗದ ಪ್ರೋೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಡಾ.ಕೆ.ಬಿ.ಗುಡಸಿ ಅವರು ಧಾರವಾಡ ಕರ್ನಾಟಕ ವಿವಿಯಲ್ಲೇ ರಸಾಯನಶಾಸ ವಿಭಾಗದಲ್ಲಿ ಪ್ರೊೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎರಡು ವಿವಿಗಳಲ್ಲಿ ವರ್ಷಗಳಿಂದ ಹುದ್ದೆಗಳು ಖಾಲಿ ಉಳಿದಿದ್ದವು. ಮೈಸೂರು ಸಂಗೀತ ವಿವಿ ಮತ್ತು ಕಲಬುರಗಿ ವಿವಿ ಕುಲಪತಿ ಹುದ್ದೆಗಳ ನೇಮಕ ಬಾಕಿ ಉಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net