ಜು.16ರವರೆಗೆ ಜಿಲ್ಲೆಯಲ್ಲಿ ತುಂತುರು ಮಳೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ

rain
Published on

ಮಂಡ್ಯ: ಜಿಲ್ಲೆಯಲ್ಲಿ ಜು.12ರಿಂದ 16ರವರೆಗೆ ಮೋಡ ಕವಿದ ವಾತಾವರಣದ ಜತೆಗೆ ತುಂತುರಿನಿಂದ ಕೂಡಿದ ಸಾಧಾರಣ ಹಾಗೂ ಪ್ರಮುಖವಾಗಿ ದೀರ್ಘಾವಧಿ ಹವಾಮಾನ ಮುನ್ಸೂಚನೆ ಪ್ರಕಾರ ಜು.14ರಿಂದ 20ರವರೆಗೆ ಸರಾಸರಿ ಮಳೆಯಾಗುವ ಸಾಧ್ಯತೆ ಇದೆ.

ಭಾರತೀಯ ಹವಾಮಾನ ಇಲಾಖೆ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವರದಿಯಂತೆ ಮಾಹಿತಿ ನೀಡಿರುವ ಮೈಸೂರು ನಾಗನಹಳ್ಳಿ ಗ್ರಾಮೀಣ ಕೃಷಿ ಹವಾಮಾನ ಕ್ಷೇತ್ರ ವಿಭಾಗ, ಈ ಅವಧಿಯಲ್ಲಿ ಗರಿಷ್ಟ 30 ರಿಂದ 31 ಹಾಗೂ ಕನಿಷ್ಟ 22 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಅಂತೆಯೇ ಗಾಳಿ ಪ್ರತಿ ಗಂಟೆಗೆ 4 ರಿಂದ 6 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ.

ಇನ್ನು ಟೊಮ್ಯಾಟೊ ಬೆಳೆಗೆ ತಡವಾಗಿ ಅಂಗಮಾರಿ ರೋಗ ಬರುವ ಸಾಧ್ಯತೆ ಇರುವುದರಿಂದ ಎಲೆಗಳ ಕೆಳಭಾಗದಲ್ಲಿ ಬಿಳಿ ಅಥವಾ ಬೂದು ಬಣ್ಣದ ಶಿಲೀಂಧ್ರವು ಕಾಣಿಸಿಕೊಳ್ಳುತ್ತದೆ. ರೋಗ ಉಲ್ಭಣಗೊಂಡಾದ ಗಿಡ ಒಣಗುತ್ತದೆ. ಇದರ ಹತೋಟಿಗಾಗಿ ಶಿಲೀಂಧ್ರ ನಾಶಕಗಳಾದ 2.5 ಗ್ರಾಂ ಕ್ಯಾಪ್ಟನ್, 50 ಡಬ್ಲುೃಪಿ ಅಥವಾ 2.5 ಗ್ರಾಂ ಕ್ಯಾಪ್ಟನ್, 75 ಡಬ್ಲುೃಪಿ ಅಥವಾ 2.5 ಗ್ರಾಂ ಆಕ್ಸಿಕ್ಲೋರೈಡ್, ಶೇ.50ರಷ್ಟು ಡಬ್ಲುೃಪಿ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಎಕೆರೆಗೆ 300 ಲೀ ಸಿಂಪರಣಾ ದ್ರಾವಣ ಬೇಕಾಗುತ್ತದೆ. ತೆಂಗು ಬೆಳೆಗೆ ರುಗೋಸ್ ಬಿಳಿ ನೋಣ ಹರಡುವ ಸಂಬಂಭವಿರುವುದರಿಂದ ಬಿಳಿನೋಣಗಳು ಎಲೆಗಳ ಕೆಳಭಾಗದಲ್ಲಿ ರಸವನ್ನು ಹೀರುತ್ತವೆ. ಹೆಚ್ಚು ರಸಹೀರುವುದರಿಂದ ಸಿಹಿಯಾದ ದ್ರವ್ಯವನ್ನು ಹೊರಹಾಕುತ್ತದೆ. ಇದು ಕಪ್ಪು ಶಿಲೀಂಧ್ರದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಸಸ್ಯದ ದ್ಯುತಿ ಸಂಶ್ಲೇಷಕದ ಮೇಲೆ ಪರಿಣಾಮ ಬೀರುತ್ತದೆ. ಶೇ.2.5 ಮೈದಾ ಪೇಸ್ಟ್ ದ್ರಾವಣವನ್ನು ಸಿಂಪಡಿಸಬಹುದು. ಹೆಚ್ಚು ಹಾನಿಯಾದಲ್ಲಿ ಬೇವಿನಎಣ್ಣೆ ಶೇ.0.5 ಸಿಂಪಡಿಸಬಹುದು.

ಮಾವು ಬೆಳೆಯ ಇಳುವರಿ ಹೆಚ್ಚಿಸಲು ಸವರುವಿಕೆ ಪ್ರಕ್ರಿಯೆ ಮಾಡಬಹುದು. ಮಾವಿನಲ್ಲಿ ರೆಂಬೆಗಳು ಒತ್ತಾಗಿ ಬೆಳೆದಾರ ಅವುಗಳಲ್ಲಿ ಕೆಲವೊಂದು ರೆಂಬೆಗಳನ್ನು ಕತ್ತರಿಸಿ ತೆಳುಗೊಳಿಸಿದರೆ ಸೂರ್ಯನ ಬೆಳಕು ಒಳಭಾಗಕ್ಕೆ ಬೀಳುವಂತಾಗಿ ಅಲ್ಲಿಯೂ ಸಹ ಕಾಯಿ ಕಚ್ಚುತ್ತದೆ. ಇದರಿಂದ ಇಳುವರಿ ಹಾಗೂ ಹಣ್ಣಿನ ಗುಣಮಟ್ಟ ಉತ್ತಮವಾಗುತ್ತದೆ. ಹಣ್ಣಿನ ಕೊಯ್ಲು ಆದನಂತರ ಅಂದರೆ ಜೂನ್ ಮತ್ತು ಜುಲೈನಲ್ಲಿ ಕತ್ತರಿಸಲು ಸೂಕ್ತ ಸಮಯವಾಗಿರುತ್ತದೆ ಎಂದು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net