ಡಾ. ಶ್ರುತಿ ಬಲ್ಲಾಳ್​ಗೆ 'ಚಾಣಕ್ಯ' ಪ್ರಶಸ್ತಿ

UDP-18-2-Chaanakya New
Published on

ಆರೋಗ್ಯ ಕ್ಷೇತ್ರದ ಸೇವೆ, ಸಾಧನೆಗೆ ಪುರಸ್ಕಾರ

ಉಡುಪಿಯ ಖ್ಯಾತ ಮಧುಮೇಹ ತಜ್ಞೆ

ಉಡುಪಿ: ಮಧುಮೇಹ ಕಾಯಿಲೆ ಹಾಗೂ ನಿಯಂತ್ರಣದ ಕುರಿತು 100ಕ್ಕೂ ಅಧಿಕ ಉಚಿತ ಶಿಬಿರ ನಡೆಸಿರುವ ಉಡುಪಿಯ ಖ್ಯಾತ ಮಧುಮೇಹ ತಜ್ಞೆ ಡಾ. ಶ್ರುತಿ ಬಲ್ಲಾಳ್​ ಅವರಿಗೆ ಚಾಣಕ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Dr.Shruti Ballal
ಡಾ. ಶ್ರುತಿ ಬಲ್ಲಾಳ್

ಮಂಗಳೂರಿನ ಮೋತಿ ಮಹಲ್​ನಲ್ಲಿ ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಂಡಳಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಾಧಕರಿಗೆ 15ನೇ ವರ್ಷದ ಪ್ರತಿಷ್ಠಿತ ಚಾಣಕ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸಚಿವ ಶ್ರೀಪಾದ ನಾಯ್ಕ್​ ಪ್ರಶಸ್ತಿ ಪ್ರದಾನ ಮಾಡಿದರು. ಡಾ. ದೀಪಣ್ಕರ್​ ರಾಯ್​, ಗೀತಾ ಶಂಕರ್​, 2024ರ ಮಿಸ್​ ಗ್ಲೋಬಲ್​ ಇಂಡಿಯಾ ಸ್ವೀಜಲ್​ ಮಾರಿಯಾ ಪುರ್ಟಾಡೋ ಇತರರಿದ್ದರು.

ನಿರಂತರ ಆರೋಗ್ಯ ಮಾಹಿತಿ

ಎಕ್ಸಲೆನ್ಸ್​ ಇನ್​ ಹೆಲ್ತ್​ ಕಮ್ಯುನಿಕೇಷನ್​ ವಿಭಾಗದಲ್ಲಿ ಡಾ. ಶ್ರುತಿ ಅವರ ಸೇವೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಸಾಮಾಜಿಕ ಸೇವಾ ಚಟುವಟಿಕೆಗಳಲ್ಲೂ ಸಕ್ರಿಯರಾಗಿರುವ ಅವರು, ಉಡುಪಿಯ ಬಿಗ್​ ಮೆಡಿಕಲ್​ ಸೆಂಟರ್​ನ ಮಧುಮೇಹ ತಜ್ಞರಾಗಿದ್ದಾರೆ. ಉತ್ತಮ ಜೀವನ ಶೈಲಿ, ಆಹಾರ ಪದ್ಧತಿ, ಮಧುಮೇಹ ತಡೆಗಟ್ಟುವಿಕೆ, ಆರೈಕೆ ವಿಚಾರವಾಗಿ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಿರಂತರ ಆರೋಗ್ಯ ಮಾಹಿತಿ ನೀಡುವ ಕಾರ್ಯದಲ್ಲೂ ತೊಡಗಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net