ಸಕ್ಕರೆನಾಡಿನಲ್ಲಿ ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯುತ್ಸವದ ಸಂಭ್ರಮ

1 (1)
Published on

ಮಂಡ್ಯ: ನಾಡಿನ ಅಧಿದೇವತೆ ಶ್ರೆ ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯುತ್ಸವ ಅಂಗವಾಗಿ ಜಿಲ್ಲೆಯ ಎಲ್ಲ ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ, ಹವನ ಕಾರ‌್ಯಕ್ರಮ ನಡೆಯಿತು.

ನಗರದ ಬನ್ನೂರು ರಸ್ತೆಯಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ಬೆಳಗಿನಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ವರ್ಧಂತ್ಯುತ್ಸವ ಅಂಗವಾಗಿ ದೇವಾಲಯದ ಆವರಣವನ್ನು ಶೃಂಗರಿಸಲಾಗಿತ್ತು. ನಿನ್ನೆಯಿಂದಲೇ ವಿವಿಧ ಧಾರ್ಮಿಕ ಕಾರ‌್ಯಕ್ರಮಗಳನ್ನು ನಡೆಸಲಾಯಿತು. ಇಂದು ವಿಶೇಷ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಮಹಿಳೆಯರು ದರ್ಶನ ಹಾಗೂ ಪ್ರಸಾದಕ್ಕಾಗಿ ಸಾಲುಗಟ್ಟಿ ನಿಂತಿದ್ದುದು

ಶ್ರೀ ಮಾತಾ ಮಹಿಳಾ ಮಂಡಳಿ ವತಿಯಿಂದ ವಿದ್ಯಾನಗರದಲ್ಲಿರುವ ಗಣಪತಿ ದೇವಾಲಯದಲ್ಲಿ ಜಗನ್ಮಾತೆ, ಚಾಮುಂಡೇಶ್ವರಿ ಜಯಂತಿ ಅಂಗವಾಗಿ ವಿಶೇಷ ಚಂಡಿಕಾ ಹೋಮವನ್ನು ಏರ್ಪಡಿಸಲಾಗಿತ್ತು. ಕಳಶ ಸ್ಥಾಪನೆ, ಸ್ವಸ್ತಿ ವಾಚನ ಜಪ-ತಪ, ಹೋಮ-ಹವನ ಪಾರಾಯಣಾದಿಗಳು ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಸುಮಾರು 300ಕ್ಕೂ ಹೆಚ್ಚು ಮಂದಿ ಸುಮಂಗಲಿಯರು ಪೂಜಾ ಕಾರ‌್ಯದಲ್ಲಿ ಪಾಲ್ಗೊಂಡಿದ್ದರು. ಚಂಡಿಕಾ ಹೋಮದ ನೇತೃತ್ವವನ್ನು ಪ್ರತಿಮಾ ರಮೇಶ್, ಮಾಲಾ ನಾಗೇಶ್ವರರಾವ್, ಗೀತಾ ಅನಂತರಾಮು, ಮಂಜುನಾಥ, ಮಂಜುಳಾ ಉದಯಶಂಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net