ಚಾಮುಂಡೇಶ್ವರಿ ವೈಭವದ ಮೆರವಣಿಗೆ

Chamundeshwari is a glorious procession
ಹುನಗುಂದ ಪಟ್ಟಣದಲ್ಲಿ ನವರಾತ್ರಿ ಉತ್ಸವ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಚಾಮುಂಡೇಶ್ವರಿ ಮೆರವಣಿಗೆ ವೈಭವದಿಂದ ನಡೆಯಿತು.
Published on

ಹುನಗುಂದ:ನವರಾತ್ರಿ ಉತ್ಸವ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಚಾಮುಂಡೇಶ್ವರಿ ಮೆರವಣಿಗೆ ವೈಭವದಿಂದ ನಡೆಯಿತು.

ಬಡಿಗೇರ ಓಣಿಯ ಗ್ರಾಮದೇವತೆ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ವತಿಯಿಂದ 9 ದಿನ ದೇವಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಪ್ರತಿದಿನ ಸಂಜೆ ದೇವಿ ಪುರಾಣ, ಪ್ರವಚನ, ದೇವಿಗೆ ಕುಂಕುಮಾರ್ಚನೆ, ಉಡಿ ತುಂಬುವ ಕಾರ್ಯಕ್ರಮ, ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆದವು. ವಿಜಯದಶಮಿ ಅಂಗವಾಗಿ ಪಟ್ಟಣದ ಸಂಗಮೇಶ್ವರ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಗಾಂಧಿ ವತ್ತ, ನಿಂಗದ ಕಟ್ಟೆ, ಜಮಾದಾರ ಶಾಲೆಯಿಂದ ಪ್ರಮುಖ ಬೀದಿಗಳಲ್ಲಿ ಭವ್ಯ ಮೂರ್ತಿ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಮಕ್ಕಳು, ಮಹಿಳೆಯರು ಕೋಲಾಟ, ಡಿಜೆ ತಾಳಕ್ಕೆ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು. ಹುನಗುಂದದ ಗುರಪ್ಪಯ್ಯ ಸ್ವಾಮಿಗಳು, ಕೂಡಲಸಂಗಮದ ಬ್ರಹ್ಮಾಂಡಬೇರಿ ಮಠದ ಗುರಪ್ಪಯೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವಿಶ್ವಕರ್ಮ ಸಮಾಜದ ಮುಖಂಡರಾದ ವಿಶ್ವನಾಥ ಗಲಗಲಿ, ವಿಜಯಕುಮಾರ ಪತ್ತಾರ, ಸಂಜೀವ ಮಾಡಬಾಳ, ನರಸಿಂಹ ಪತ್ತಾರ, ವಸಂತ ಪತ್ತಾರ, ನಾಗಪ್ಪ ಪತ್ತಾರ, ಶಿರಸಪ್ಪ ಬಡಿಗೇರ, ರಾಜು ಬಡಿಗೇರ, ಮೌನೇಶ ಪತ್ತಾರ, ಅಶೋಕ ಪತ್ತಾರ, ಸುರೇಶ ಬಡಿಗೇರ, ವಿರುಪಾಕ್ಷ ಬಡಿಗೇರ, ಅಮರೇಶ ಪತ್ತಾರ, ಪ್ರವೀಣ ಬಡಿಗೇರ, ನಟರಾಜ ಬಡಿಗೇರ, ಪ್ರಶಾಂತ ಪತ್ತಾರ, ಶ್ರೀಧರ ಪತ್ತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net