ಮಡಿಕೇರಿಯ ಬ್ರೈನೋಬ್ರೈನ್ ಸಂಸ್ಥೆಗೆ ಚಾಂಪಿಯನ್ ಟ್ರೋಫಿ

MDK03
Published on

ಮಡಿಕೇರಿ: ಬ್ರೈನೋಬ್ರೈನ್ ಫೆಸ್ಟ್-೨೦೨೨ ರಾಜ್ಯ ಮಟ್ಟದ ೧೩೩ನೇ ಅಬಾಕಸ್ ಸ್ಪರ್ಧೆಯಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಸಂಸ್ಥೆಯ ವಿದ್ಯಾರ್ಥಿಗಳು ಚಾಂಪಿಯನ್ ಟ್ರೋಫಿ, ಚಿನ್ನ, ಬೆಳ್ಳಿ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.


ಬೆಂಗಳೂರಿನ ವಸಂತನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರಾಜ್ಯ ಮಟ್ಟದ ಮನೋಗಣಿತ(ಅಬಾಕಸ್) ಸ್ಪರ್ಧೆಯಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಸಂಸ್ಥೆಯ ಒಟ್ಟು ೩೭ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕೇವಲ ೩ ನಿಮಿಷದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಮಾಡುವ ಮೂಲಕ ೨೦ ಚಾಂಪಿಯನ್ ಟ್ರೋಫಿ, ೧೦ ಚಿನ್ನದ ಪದಕ ಹಾಗೂ ೭ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಶೇಕಡಾವಾರು ಚಾಂಪಿಯನ್ ಟ್ರೋಫಿ ಪಡೆದ ಸಾಲಿನಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಸಂಸ್ಥೆ ಮೊದಲನೇ ಸ್ಥಾನ ಪಡೆದುಕೊಂಡಿತು. ಅಲ್ಲದೆ ಬೆಸ್ಟ್ ಫ್ಯಾಕಲ್ಟಿ ಅವಾರ್ಡ್ ಹಾಗೂ ಬೆಸ್ಟ್ ಫ್ರಾಂಚೈಸಿ ಅವಾರ್ಡ್ ಅನ್ನು ಸಂಸ್ಥೆಯ ವ್ಯವಸ್ಥಾಪಕಿ ಮಾಪಂಗಡ ಕವಿತಾ ಕರುಂಬಯ್ಯ ಪಡೆದುಕೊಂಡರು.


ಈ ಸಂದರ್ಭ ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಮ್, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಮ್, ಪ್ರಾದೇಶಿಕ ನಿರ್ದೇಶಕ ನೀಲ್ ಕಮಲ್ ಹಾಗೂ ವಿವಿಧ ತರಬೇತಿ ಕೇಂದ್ರದ ಮುಖ್ಯಸ್ಥರು ಹಾಜರಿದ್ದರು. ಸ್ಪರ್ಧೆಯಲ್ಲಿ ಐದು ವರ್ಷದಿಂದ ಏಳು ವರ್ಷದ ವಿಭಾಗದಲ್ಲಿ ಭಾಗವಹಿಸಿದ ಸಂಸ್ಥೆಯ ೫ ವರ್ಷದ ಎಚ್.ಜೆ.ಚೇತಸ್ ಮತ್ತು ನುಷ್ಕ ಕೊಡಂದೆರ ಅತಿ ಚುರುಕಾಗಿ ಲೆಕ್ಕ ಮಾಡುವ ಮೂಲಕ ಇಂಟರ್ ನ್ಯಾಷನಲ್ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಮ್‌ರವರ ಪ್ರಶಂಸೆಗೆ ಪಾತ್ರರಾದರು.


ಚಾಂಪಿಯನ್ ಟ್ರೋಫಿ ವಿಜೇತರು: ಬಿ.ಎಂ.ಆರವ್ ಬೋಪಣ್ಣ, ಟಿ.ಬಿ.ಅಫ್ಘಾನ್ ಅಹಮ್ಮದ್, ಎಸ್.ಐಶ್ವರ್ಯ, ಅನ್ಶೀಲ್ ಲೋಬೋ, ಅಪೇಕ್ಷಾ ಆರ್. ರೈ, ಎನ್.ಕೆ.ಚಹನ, ಎಚ್.ಜೆ.ಚೇತಸ್, ದೃತಿ ಜೆ ಪೂಜಾರಿ, ಎಂ.ಸಿ.ಗೌರವ್, ಡಬ್ಲ್ಯೂ.ವಿ.ಕುನಾಲ್ ಪ್ರಸಾದ್, ಜಿ.ವಿ.ಲಿಕಿತ್, ಡಿ.ಎಂ.ಮೀನಾಕ್ಷಿ, ಎನ್. ನಿರನ್ ಪೂವಣ್ಣ, ನಾಪಂಡ ನೀಶ ಪೂವಣ್ಣ, ನುಷ್ಕ ಕೊಡಂದೆರ, ನೈಷ ನಾಚಯ್ಯ ಪಾಲೆಕಂಡ, ಪ್ರತ್ಯೂಶ ಎಂ.ಸುವರ್ಣ, ಟಿ.ಎಂ.ಪ್ರೀತಮ್, ಪಿ.ಎಂ.ಪುನಿತ, ಎ.ವೈ.ತ್ರೀಷ ಚಾಂಪಿಯನ್ ಟ್ರೋಫಿ ಪಡೆದುಕೊಂಡಿದ್ದಾರೆ.


ಚಿನ್ನದ ಪದಕ ವಿಜೇತರು: ಪಿ.ಅನ್ವಿ, ಪಿ.ಕೆ.ಕೃಷ್ಣ ಪ್ರಿಯ, ಕೆ.ಸಿ.ಲಾಸ್ಯ, ಕೆ.ಸಿ.ಲಕ್ಷ್ಯ, ಡಿ.ಎ.ಮೊಹಮ್ಮದ್ ಅಧ್ಯಾನ್, ಎಂ.ಎಸ್.ನಿತೀಶ್, ಎಸ್.ಪಿ.ಪ್ರಣತಿ, ಬಿ.ಪಿ.ರಕ್ಷ್ ಪೊನ್ನಣ್ಣ, ಎ.ಎಫ್.ಸೋಹ ಫಾತೀಮ, ಟಿ.ಪಿ.ನಿಧಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೆಳ್ಳಿ ಪದಕ ವಿಜೇತರು: ಎಂ.ವಿ.ಪೂರ್ವಿತ್, ಅರ‌್ನ ಕುಶಾಲಪ್ಪ, ಡಿ.ಎನ್.ದೀಷ್ಣ, ಪಿ.ಕೆ.ಸಂಜನ, ಪಿ.ಕೆ.ಶ್ಯಾಮ್ ಸುಂದರ್, ಟಿ.ಪಿ.ನಿತ್ಯ, ತನ್ಮಯಿ ಡಿ.ಮಹೇಶ್ ಬೆಳ್ಳಿ ಪದಕ ಪಡೆದುಕೊಂಡರು.


ರಾಜ್ಯದ ವಿವಿಧ ಕೇಂದ್ರಗಳಿಂದ ಆಗಮಿಸಿದ್ದ ೪ ರಿಂದ ೧೪ ವರ್ಷದ ಸಾವಿರಾರು ವಿದ್ಯಾರ್ಥಿಗಳು ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಹಿಂದೆಯೂ ರಾಷ್ಟ್ರ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದೀಗ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪಾಲಕರು, ವಿದ್ಯಾರ್ಥಿಗಳು ಹಾಗೂ ಇಡೀ ತಂಡದ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕಿ ಮಾಪಂಗಡ ಕವಿತಾ ಕರುಂಬಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net