ಥ್ರೋಬಾಲ್‌ನಲ್ಲಿ ಚಾಂಪಿಯನ್

Published on

ಬದಿಯಡ್ಕ: ಕಾಸರಗೋಡು ಜಿಲ್ಲಾ ಸೀನಿಯರ್ ಥ್ರೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ ವಿಭಾಗದಲ್ಲಿ ನವಯುಗ ಸ್ಪೋರ್ಟ್ಸ್ ಕ್ಲಬ್ ಹಾಗೂ ಮಹಿಳೆಯರ ವಿಭಾಗದಲ್ಲಿ ಎಸ್.ಎ.ಪಿ.ಎಚ್.ಎಸ್. ಅಗಲ್ಪಾಡಿ ಚಾಂಪಿಯನ್‌ಷಿಪ್ ಪಡೆದುಕೊಂಡಿದೆ.

ನೀರ್ಚಾಲು ಶಾಲೆಯಲ್ಲಿ ಜರುಗಿದ ಬಹುಮಾನ ವಿತರಣಾ ಸಮಾರಂಭವನ್ನು ನಿವೃತ್ತ ದೈಹಿಕ ಶಿಕ್ಷಕ ಬಶೀರ್ ಅಹಮದ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಕೆ.ಸೂರ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. ಸಂತೋಷ್ ಪಿ.ಎಚ್, ಸಂತೋಷ್ ಕುಮಾರ್ ಮೊದಲಾದವರು ಶುಭಹಾರೈಸಿದರು. ಶಶಿಕಾಂತ್ ಜಿ.ಆರ್. ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net