ಮೈಸೂರು ವಿವಿ ಮಟ್ಟದ ಕುಸ್ತಿ ಪಂದ್ಯಾವಳಿ: ಮಹಿಳಾ ಸರ್ಕಾರಿ ಕಾಲೇಜು ಚಾಂಪಿಯನ್

Champion in the wrestling tournament Mandya
Published on

ಮಂಡ್ಯ: ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜು(ಸ್ವಾಯತ್ತ) ‘ಚಾಂಪಿಯನ್’ ಆಗಿ ಹೊರಹೊಮ್ಮಿದೆ.

ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದ ಜಿಮ್ಯಾಶಿಯಂ ಹಾಲ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ 3 ಪ್ರಥಮ ಹಾಗೂ 2 ದ್ವಿತೀಯ ಸ್ಥಾನ ಸೇರಿದಂತೆ ಐದು ಪದಕಗಳನ್ನು ಮಹಿಳಾ ಸರ್ಕಾರಿ ಕಾಲೇಜು ಪಡೆದಿದ್ದು, ಇದರೊಂದಿಗೆ ಒಟ್ಟು 21 ಅಂಕ ಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಲ್ಲದೆ ಭಾರ ಎತ್ತುವ ಸ್ಪರ್ಧೆಯಲ್ಲಿಯೂ ಸಹ ಕಾಲೇಜಿನ ವಿದ್ಯಾರ್ಥಿನಿಯರು 3 ದ್ವಿತೀಯ ಹಾಗೂ 1 ತೃತೀಯ ಸ್ಥಾನ ಪಡೆದು ಒಟ್ಟು 4 ಪದಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಅಂತರ ವಲಯಕ್ಕೆ ಆಯ್ಕೆ: ಮೈಸೂರು ವಿಶ್ವವಿದ್ಯಾಲಯ ಮಾಂಡವ್ಯ ವಲಯ ಮಟ್ಟದ ಅಂತರ ಕಾಲೇಜುಗಳ ಮಹಿಳಾ ಟೆನ್ನಿಕಾಯ್ಡಿ ಪಂದ್ಯಾವಳಿಯಲ್ಲೂ ಮಹಿಳಾ ಸರ್ಕಾರಿ ಕಾಲೇಜು ಪ್ರಥಮ ಸ್ಥಾನ ಗಳಿಸಿ ವಿಶ್ವವಿದ್ಯಾಲಯದ ಅಂತರ ವಲಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲೆ ಎಚ್.ಎಂ.ಹೇಮಲತಾ, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಆರ್.ಲೋಕೇಶ್, ಗೆಜೆಟೆಡ್ ಮ್ಯಾನೇಜರ್ ಕೆ.ಪಿ.ರವಿಕಿರಣ್, ಅಧೀಕ್ಷಕ ಎಸ್.ಎನ್.ಮಹೇಶ್ ಹಾಗೂ ಕ್ರೀಡಾ ಸಮಿತಿಯ ಸದಸ್ಯರಾದ ಎಸ್.ನವೀನ್, ಟಿ.ಆರ್.ದೀಪಕ್ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net