

ಮೈಸೂರು: ಗೋವಾದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನ್ಯಾಷನಲ್ ಸ್ಪೋರ್ಟ್ಸ್ ಡಾನ್ಸ್ ಚಾಂಪಿಯನ್‌ಷಿಪ್‌ನಲ್ಲಿ ಮೈಸೂರಿನ ಟೀಮ್ ಐ ಡಾನ್ಸ್ ಸ್ಟುಡಿಯೋದ 15 ವರ್ಷದೊಳಗಿನ ಮಕ್ಕಳ ತಂಡ ಭಾಗವಹಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸ್ಪರ್ಧೆಯಲ್ಲಿ ಅಭಿಷೇಕ್, ಡಿಂಪಲ್, ಮನ್ವಿತಾ, ನಿಹಾರಿಕಾ, ಲಿಷಿತಾ, ಶ್ರೇಷ್ಠ, ಚರಿತ್, ಮಾಧುರ್ಯ, ಅಪೂರ್ವ ಇತರರು ಭಾಗವಹಿಸಿ ಚಿನ್ನದ ಪದಕ ಪಡೆದು ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದೆ. ಮಕ್ಕಳಿಗೆ ಪೃಥ್ವಿ ನಾಯಕ್ ತರಬೇತಿ ನೀಡಿದ್ದಾರೆ.