ಕರ್ನಾಟಕ ತಂಡಕ್ಕೆ ಕುಸ್ತಿ ಚಾಂಪಿಯನ್ ಶಿಪ್

IMG-20240112-WA0011.jpg
Published on

ಹುಬ್ಬಳ್ಳಿ: ತಮಿಳುನಾಡಿನ ಈರೋಡದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತ ಹಿರಿಯರ ನ್ಯಾಷನಲ್ ಲೆವಲ್ ಕ್ರೀಡಾಕೂಟದಲ್ಲಿ ಕರ್ನಾಟಕದ ಕುಸ್ತಿಪಟುಗಳು ಸಮಗ್ರ ಚಾಂಪಿಯನ್ಶಿಪ್ ಅನ್ನು ಪಡೆದುಕೊಂಡಿದ್ದಾರೆ.

ಪ್ರೀಸ್ಟೆ$ಲ್ ಪುರುಷರ ವಿಭಾಗದ ನ್ಯಾಷನಲ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕಕ್ಕೆ 8 ಚಿನ್ನ, 2 ಬೆಳ್ಳಿ ಪದಕಗಳು ಲಭಿಸಿವೆ.

ಪಟುಗಳಿಗೆ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಬಿ. ಗಣರಂಜನ್ ಶೆಟ್ಟಿ ಅವರು ಪದಕ ತೊಡಿಸಿ ಸಮಗ್ರ ಪ್ರಶಸ್ತಿ ನೀಡಿ ಗೌರವಿಸಿದರು.

ದಕ್ಷಿಣ ಭಾರತ ಕುಸ್ತಿ ಸಂಘದ ಕಾರ್ಯದರ್ಶಿ ವಿ.ಎನ್. ಪ್ರಸೂದ್, ಜಂಟಿ ಕಾರ್ಯದರ್ಶಿ ಲೋಗನಾದನ್, ಕರ್ನಾಟಕ ಕುಸ್ತಿ ಸಂಘದ ಕಾರ್ಯದರ್ಶಿ ಜೆ. ಶ್ರೀನಿವಾಸ, ಉಪಾಧ್ಯಕ್ಷ ಪ್ರಸಾದ ಶೆಟ್ಟಿ, ಜಂಟಿ ಕಾರ್ಯದರ್ಶಿ ಕೆ. ಕುಮಾರ ಹಾಗೂ ತಾಂತ್ರಿಕ ಸಮಿತಿಯ ಮುಖ್ಯಸ್ಥ ವಿನೋದಕುಮಾರ್ ಕೆ. ಅವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net